

ಕಂಪ್ಲಿ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗಳು ಜನ ಮತ್ತು ಸಮಾಜಮುಖಿಯಾಗಿವೆ ಎಂದು ಯೋಜನೆ ಬಿ.ಸಿ ಟ್ರಸ್ಟ್‌ನ ಕಲ್ಯಾಣ ಕರ್ನಾಟಕ ಪ್ರಾದೇಶಿಕ ನಿರ್ದೇಶಕ ಜೆ.ಚಂದ್ರಶೇಖರ್ ತಿಳಿಸಿದರು.
ತಾಲೂಕಿನ ರಾಮಸಾಗರದಲ್ಲಿ ಅಂಗವಿಕಲರಿಗೆ ಉಚಿತ ಪರಿಕರಗಳನ್ನು ಬುಧವಾರ ವಿತರಿಸಿ ಮಾತನಾಡಿದರು. ಟ್ರಸ್ಟ್‌ನ ಜನಮಂಗಲ ಕಾರ್ಯಕ್ರಮ ಯೋಜನೆಯಡಿ ನೀಡುತ್ತಿರುವ ಯೋಜನೆಗಳನ್ನು ಫಲಾನುಭವಿಗಳು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಅಂಗವಿಕಲರಿಗೆ ವಾಟರ್ ಬೆಡ್, ಸೇಫ್ ವಾಕರ್ ಹಾಗೂ ಆರೋಗ್ಯ ವಿಮಾ ಯೋಜನೆಯಡಿ ಸ್ವಸಹಾಯ ಸಂಘಗಳ ಒಂಬತ್ತು ಫಲಾನುಭವಿಗಳಿಗೆ ತಲಾ 20 ಸಾವಿರ ರೂ. ಮಂಜೂರಾತಿ ಪತ್ರ ವಿತರಿಸಲಾಯಿತು. ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ ಹೇಮಯ್ಯಸ್ವಾಮಿ, ಡಾ.ವೆಂಕಟೇಶ್ ಭರಮಕ್ಕನವರ್, ಯೋಜನಾಧಿಕಾರಿ ಎಂ.ಎ.ಹಾಲಪ್ಪ, ಕೃಷಿ ಅಧಿಕಾರಿ ಸಂಜುಕುಮಾರ್, ಮೇಲ್ವಿಚಾರಕರಾದ ಮಂಜುಳಾ, ರಾಜಕುಮಾರ್, ಅವಿನಾಶ್ ಇತರರಿದ್ದರು.