ಸಿಕ್ಕ ಅವಕಾಶ ಸದ್ಬಳಕೆ ಮಾಡಿಕೊಂಡು ಯಶಸ್ಸು ಗಳಿಸಿ

02HDK00006
filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 0;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 43;
Published on

ಎಚ್.ಡಿ.ಕೋಟೆ : ಇದೇ ರೀತಿಯಾದ ಉದ್ಯೋಗ ಬೇಕು ಎಂದು ಕಾಯಬೇಡಿ. ಸಿಕ್ಕಿರುವ ಅವಕಾಶವನ್ನು ಸದುಪಯೋಗ ಮಾಡಿಕೊಂಡು ಯಶಸ್ಸುಗಳಿಸಬೇಕು ಎಂದು ಆ್ಯಕ್ಸಿಸ್ ಬ್ಯಾಂಕ್ ಮ್ಯಾನೇಜರ್ ಶೃತಿ ನಿರುದ್ಯೋಗಿಗಳಿಗೆ ಸಲಹೆ ನೀಡಿದರು.


ಪಟ್ಟಣದ ಶ್ರೀ ಆದಿ ಚುಂಚನಗಿರಿ ಕಾಲೇಜು ವತಿಯಿಂದ ಕಾಲೇಜು ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ಉದ್ಯೋಗ ಮೇಳದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.


ಓದಿದ ಮಾತ್ರಕ್ಕೆ ಕೆಲಸ ಸಿಗುತ್ತದೆ ಎಂಬುದು ಸುಳ್ಳು. ಕೆಲಸ ಗಿಟ್ಟಿಸಿಕೊಳ್ಳಲು ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಬೇಕಾಗುತ್ತದೆ. ಪರೀಕ್ಷೆಗಳನ್ನು ಎದುರಿಸುವ ಶಕ್ತಿ ನಿಮ್ಮಲ್ಲಿ ಇರಬೇಕು. ಅದಕ್ಕೆ ಬೇಕಾದ ಸಿದ್ಧತೆಗಳನ್ನು ಶ್ರಮ ವಹಿಸಿ ಮಾಡಬೇಕು ಎಂದು ಕೋರಿದರು.


ಆದಿ ಚುಂಚನಗಿರಿ ಸಂಸ್ಥೆ ವಿದ್ಯಾಭ್ಯಾಸಕ್ಕೆ ಸೀಮಿತ ಆಗದೆ, ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸಬೇಕು ಎನ್ನುವ ನಿಟ್ಟಿನಲ್ಲಿ ಕಂಪನಿಗಳ ಜತೆ ನಿರಂತರ ಸಂಪರ್ಕ ಇಟ್ಟುಕೊಂಡು ಉದ್ಯೋಗ ಮೇಳವನ್ನು ಆಯೋಜನೆ ಮಾಡಿದೆ. ಈ ಮೇಳವನ್ನು ಆಕಾಂಕ್ಷಿಗಳು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.


ಆಪ್ಟಿಮಾಮ್ ಕಂಪನಿಯ ನಿರ್ದೇಶಕಿ ದಿವ್ಯಾ ಮಾತನಾಡಿ, ಶುಲ್ಕ ಕಟ್ಟಿಸಿಕೊಂಡು ಅಲ್ಲಿಗೆ ನಮ್ಮ ಕೆಲಸ ಮುಗಿಯಿತು ಎನ್ನುವ ಸಂಸ್ಥೆಗಳು ಇರುವ ಇಂತಹ ದಿನಗಳಲ್ಲಿ ಉದ್ಯೋಗ ಮೇಳ ಆಯೋಜಿಸಿ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸಿ ಕೊಡಲಾಗುತ್ತುದೆ. ಆ ಮೂಲಕ ಅವರಿಗೆ ಅನುಕೂಲ ಮಾಡಿಕೊಡುವ ಶ್ರೀ ಆದಿ ಚುಂಚನಗಿರಿ ಸಂಸ್ಥೆಯ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದರು.


ಕೆಲಸ ಬೇಕು ಎಂದರೆ ಮೊದಲು ಕಲಿಯಬೇಕು. ದೊಡ್ಡದೊಡ್ಡ ವ್ಯಕ್ತಿಗಳು ಒಂದೇ ಬಾರಿಗೆ ಯಶಸ್ಸು ಪಡೆದಿಲ್ಲ. ತಪ್ಪುಗಳನ್ನು ತಿದ್ದಿಕೊಂಡು ಮುಂದರೆವರೆದರೆ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದರು.


ಸಂಸ್ಥೆಯ ಆಡಳಿತ ಅಧಿಕಾರಿ ಡಾ.ಕೆ.ಪಿ.ಬಸವೇಗೌಡ ಮಾತನಾಡಿ, ತಾಲೂಕಿನಲ್ಲಿ ಕಳೆದ 20 ವರ್ಷಗಳ ಹಿಂದೆ ಹೆಣ್ಣು ಮಕ್ಕಳು ವಿದ್ಯಾಭ್ಯಾಸ ಮಾಡಲು ಸಾಧ್ಯ ವಾಗುತ್ತಿರಲಿಲ್ಲ. ಶ್ರೀ ಬಾಲ ಗಂಗಾಧರ ನಾಥ ಸ್ವಾಮೀಜಿ ಅವರ ಪರಿಶ್ರಮದಿಂದ ಸುಮಾರು ಹತ್ತು ಸಾವಿರ ಹೆಣ್ಣು ಮಕ್ಕಳು ಸಂಸ್ಥೆಯಲ್ಲಿ ಶಿಕ್ಷಣ ಕಲಿತು ಬೇರೆಬೇರೆ ಕಡೆ ಉದ್ಯೋಗ ಕಲ್ಪಿಸಿಕೊಂಡಿದ್ದಾರೆ. ಯಾವುದೇ ಸ್ವಾಮೀಜಿಗಳು ಮಠವನ್ನು ಬಿಟ್ಟು ಬರುವುದಿಲ್ಲ. ಆದರೆ ಶ್ರೀ ಬಾಲಗಂಗಾಧರ ನಾಥ ಸ್ವಾಮೀಜಿ ಅವರು ತಾಲೂಕಿನ ಪ್ರತಿ ಗ್ರಾಮಕ್ಕೆ ತೆರಳಿ ಜನರನ್ನು ಮನವೊಲಿಸಿ ವಿದ್ಯಾಭ್ಯಾಸ ಕೊಡಿಸಲು ಸಾಕಷ್ಟು ಶ್ರಮಿಸಿದರು ಎಂದರು.


ಉದ್ಯೋಗ ಮೇಳದಲ್ಲಿ 400 ಉದ್ಯೋಗ ಆಕಾಂಕ್ಷಿಗಳು ಭಾಗವಹಿಸಿದ್ದರು. ಅವರಲ್ಲಿ 200ಕ್ಕೂ ಹೆಚ್ಚು ನಿರುದ್ಯೋಗಿಗಳು ವಿವಿಧ ಕಂಪನಿಗಳಿಗೆ ಆಯ್ಕೆಯಾದರು.


ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲರಾದ ಡಾ.ಜೆ.ಎನ್.ವೆಂಕಟೇಶ್, ಪಿಯು ಕಾಲೇಜಿನ ಪ್ರಾಂಶುಪಾಲ ಬೈರೇಗೌಡ, ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ನಂದಿನಿ, ದೈಹಿಕ ಶಿಕ್ಷಣ ನಿರ್ದೇಶಕ ಕಲ್ಲೇಶ್ ಗೌಡ, ಮುಖ್ಯ ಶಿಕ್ಷಕ ಎ.ಸಿ.ಬೈರಪ್ಪ, ವಿವಿಧ ಕಂಪನಿಗಳ ಮುಖ್ಯಸ್ಥರುಗಳಾದ ಸಂತೋಷ್, ದಿವ್ಯಾಆಚಾರ್, ರೀನಾ, ಉಪನ್ಯಾಸಕರುಗಳಾದ ಮಹೇಂದ್ರ ಸಿದ್ದೇಗೌಡ, ರಾಮಚಂದ್ರ ಸಿದ್ದರಾಜು, ಚೆನ್ನಕೇಶವ, ಪ್ರಕಾಶ್, ಮಹಾದೇವ್, ರವೀಶ್, ರವಿ, ಮಹೇಶ್, ಪ್ರೀತಿ, ಚಂದನಾ, ಮಂಜು ಸಂಗೀತಾ, ಅವಿನಾ, ಶಾಂಭವಿ, ಚಿಕ್ಕದೇವಿ, ಮುಖಂಡರಾದ ಕಾಳೇಗೌಡ, ಬಿ.ಪಿ.ಭಾಸ್ಕರ್ ಇತರರು ಇದ್ದರು.


ನಿರುದ್ಯೋಗಿಗಳಿಗೆ ಉದ್ಯೋಗ ಮೇಳ ಆಯೋಜಿಸಿರುವುದು ತುಂಬಾ ಖುಷಿಯ ವಿಚಾರ. ಇದರಿಂದ ಬಡ ವಿದ್ಯಾರ್ಥಿಗಳಿಗೆ ಅನುಕೂಲ ಆಗುತ್ತದೆ. ಇದು ಇಲ್ಲಿಗೆ ನಿಲ್ಲಬಾರದು ಪ್ರತಿ ವರ್ಷ ಆಯೋಜನೆ ಮಾಡಬೇಕು ಎಂದು ಸಲಹೆ ನೀಡಿದರು.
ಪಾವನ ಹುಣಸೂರು ಉದ್ಯೋಗ ಆಕಾಂಕ್ಷೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net