ಗ್ರಂಥಾಲಯ ಸದುಪಯೋಗ ಪಡೆಯಿರಿ

4 vikram 5
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಬಾಲ್ಯದಲ್ಲಿ ಗ್ರಂಥಾಲಯದ ಜತೆಗೆ ಹೆಚ್ಚಿನ ಒಡನಾಟ ಹೊಂದಿದ್ದೆ. ಗ್ರಂಥಾಲಯ ಎಲ್ಲ ಮೂಲಭೂತ ಸೌಲಭ್ಯ ಒಳಗೊಂಡ ಮಾದರಿಯ ಗ್ರಂಥಾಲಯವಾಗಿದ್ದು, ಪ್ರತಿಯೊಬ್ಬರೂ ಗ್ರಂಥಾಲಯದ ಸದುಪಯೋಗ ಪಡೆಯಬೇಕು ಎಂದು ಮೇಯರ ರಾಮಪ್ಪ ಬಡಿಗೇರ ಹೇಳಿದರು.
ಧಾರವಾಡ ನಗರ ಕೇಂದ್ರ ಗ್ರಂಥಾಲಯ ಸಭಾಗಂಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಗ್ರಂಥಾಲಯ ವಿಜ್ಞಾನ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಆಧುನಿಕ ಯುಗದಲ್ಲಿ ಗ್ರಂಥಾಲಯ ಶಿಕ್ಷಣ ಅವಶ್ಯಕ, ತರಬೇತಿಗೆ ಆಯ್ಕೆಯಾದ ಎಲ್ಲ ವಿದ್ಯಾರ್ಥಿಗಳು, ಉಪನ್ಯಾಸಕರು ಹೇಳುವ ಪಾಠವನ್ನು ಗಮನದಲ್ಲಿಟ್ಟುಕೊಂಡು ಗ್ರಂಥಾಲಯ ವಿಜ್ಞಾನ ಕುರಿತು ಜ್ಞಾನಾರ್ಜನೆ ಮಾಡಿಕೊಳ್ಳಬೇಕು ಎಂದರು.
ನಗರ ಕೇಂದ್ರ ಗ್ರಂಥಾಲಯ ಉಪ ನಿರ್ದೇಶಕ ರಾಮಯ್ಯ, ತರಬೇತಿ ಕೇಂದ್ರ ಉಪನ್ಯಾಸಕ ಪ್ರೊ. ಎಸ್​.ಎಲ್​.ಸಂಗಮ, ಎಚ್​. ಎಸ್​. ಗಡ್ಡಿ, ಎಸ್​.ವಿ.ಹಿರೇಮಠ, ಮಲ್ಲಿಕಾರ್ಜುನ ಮೂಲಿಮನಿ, ವೀಣಾ ಕುಲಕರ್ಣಿ, ನಗರ ಕೇಂದ್ರ ಗ್ರಂಥಾಲಯ ಸಿಬ್ಬಂದಿ, ತರಬೇತಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net