ರೈತರ ಮಕ್ಕಳಿಗೆ ಕನ್ಯೆ ಕೊಡಲು ಮನಸ್ಸು ಮಾಡಿ

HND 8-2
ಹುನಗುಂದ ತಾಲೂಕಿನ ಹಗೇದಾಳದಲ್ಲಿ ದೇವಿ ಪುರಾಣ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಕೊಲ್ಹಾರದ ದಿಗಂಬರೇಶ್ವರ ಸಂಸ್ಥಾನ ಮಠದ ಕಲ್ಲಿನಾಥ ಸ್ವಾಮೀಜಿ ಮಾತನಾಡಿದರು. ವೇ. ಗುರುಶಾಂತಯ್ಯ ಹಿರೇಮಠ, ಶಿವಯೋಗಿ ಅಯ್ಯಪ್ಪಸ್ವಾಮಿ ಶಾಸಿಮಠ ಇದ್ದರು.
Published on

ಹುನಗುಂದ: ಜಗತ್ತಿಗೆ ಅನ್ನ ನೀಡುವ ರೈತರಿಗೆ ಇಂದಿನ ದಿನಗಳಲ್ಲಿ ಕನ್ಯೆ ಕೊಡದಿರುವುದು ದುರ್ದೈವದ ಸಂಗತಿ ಎಂದು ಕೊಲ್ಹಾರದ ದಿಗಂಬರೇಶ್ವರ ಸಂಸ್ಥಾನಮಠದ ಕಲ್ಲಿನಾಥ ಸ್ವಾಮಿಗಳು ಹೇಳಿದರು.

ತಾಲೂಕಿನ ಹಗೇದಾಳದಲ್ಲಿ ಸೋಮವಾರ ರಾತ್ರಿ ವೆಂಕಟೇಶ್ವರ ಜಾತ್ರೆ ಮಹೋತ್ಸವ ಹಾಗೂ ನವರಾತ್ರಿ ಉತ್ಸವದ ನಿಮಿತ್ತ ಆಯೋಜಿಸಿದ್ದ ದೇವಿ ಪುರಾಣ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಈ ದೇಶದಲ್ಲಿ ಎಂತಹ ದೊಡ್ಡ ಅಧಿಕಾರದಲ್ಲಿದ್ದವರೂ ರೈತರು ಬೆಳೆದ ಆಹಾರ ಸೇವಿಸಲೇಬೇಕು. ಆದ್ದರಿಂದ ಹೆತ್ತವರು ತಮ್ಮ ಮಕ್ಕಳನ್ನು ನೌಕರರಿಗೆ ಮದುವೆ ಮಾಡಿಕೊಡುವ ಮನಸ್ಥಿತಿಯಿಂದ ಹೊರಬಂದು ರೈತರ ಮಕ್ಕಳಿಗೆ ಕೊಡಲು ಮನಸ್ಸು ಮಾಡಬೇಕು ಎಂದರು.

ಮಕ್ಕಳಿಗೆ ಸಂಸ್ಕೃತಿ, ಸಂಸ್ಕಾರ, ಶಿಕ್ಷಣ ನೀಡಿದ್ದೇಯಾದರೆ ಉತ್ತಮ ಆದರ್ಶ ನಿರ್ಮಿಸಲು ಸಾಧ್ಯವಾಗುತ್ತದೆ. ಹಸಿದವರಿಗೆ ಊಟ, ಕಷ್ಟದಲ್ಲಿದ್ದವರಿಗೆ ಕೈಲಾದಷ್ಟು ಸಹಾಯ ಮತ್ತು ದಾನ ಮಾಡಬೇಕು. ತಂದೆ-ತಾಯಿಯನ್ನು ಗೌರವ, ಪ್ರೀತಿ, ವಾತ್ಸಲ್ಯದಿಂದ ಕಾಣಬೇಕು ಎಂದರು.

ವೇ. ಗುರುಶಾಂತಯ್ಯ ಹಿರೇಮಠ, ಶಿವಯೋಗಿ ಅಯ್ಯಪ್ಪಸ್ವಾಮಿ ಶಾಸಿಮಠ, ಪುರಾಣ ಪ್ರವಚನಕಾರ ಹಿರೇಮಠದ ದೊಡ್ಡಬಸಯ್ಯಶಾಸಿ ಹಿರೇಮಠ, ಸಂಗೀತಗಾರ ಯುವರಾಜ ಹಿರೇಮಠ, ತಬಲಾವಾದಕ ವೀರಭದ್ರಯ್ಯ ಗುಡದೂರಕಲ್ಮಠ, ವೆಂಕಟೇಶ್ವರ ದೇವಸ್ಥಾನದ ಟ್ರಸ್ಟ್ ಕಮಿಟಿ ಬಾನಪ್ಪ ಹಗೇದಾಳ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net