ಲಸಿಕಾ ಕಾರ್ಯಕ್ರಮ ಯಶಸ್ವಿಗೊಳಿಸಿ

19 LNG 01
ಲಿಂಗಸುಗೂರು ಪಶು ಆಸ್ಪತ್ರೆಯಲ್ಲಿ ಜಾನುವಾರುಗಳಿಗೆ ಸಾಮೂಹಿಕ ಲಸಿಕಾ ಕಾರ್ಯಕ್ರಮದ ಭಿತ್ತಿ ಪತ್ರಗಳನ್ನು ಎಡಿ ಡಾ.ರಾಚಪ್ಪ ಬಿಡುಗಡೆಗೊಳಿಸಿದರು. ತಾಪಂ ಕೌಶಲ ವಲಯ ಮೇಲ್ವಿಚಾರಕ ಬಸವರಾಜ ಕಟ್ಟಿಮನಿ, ಪಶು ಇಲಾಖೆ ವಿಸ್ತರಣಾಧಿಕಾರಿ ಡಾ.ದೇವರಾಜ, ವ್ಯವಸ್ಥಾಪಕ ಮಲ್ಲಪ್ಪ ಗಾಳಿಪೂಜಿ, ವೈದ್ಯರಾದ ಸುನೀಲ್,ಮಂಜುನಾಥ, ಅಮರೇಶ ಇತರರಿದ್ದರು.
Published on

ಲಿಂಗಸುಗೂರು: ಜಾನುವಾರುಗಳಿಗೆ ಆಯೋಜಿಸಿರುವ ಸಾಮೂಹಿಕ ಲಸಿಕಾ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಎಡಿ ಡಾ.ರಾಚಪ್ಪ ಹೇಳಿದರು.

ಸ್ಥಳೀಯ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯಿಂದ ಏರ್ಪಡಿಸಿದ ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಿತ್ತಿ ಪತ್ರಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು.

ಕಾಲು ಬಾಯಿ ರೋಗ ಹರಡದಂತೆ ಏಳು ಸುತ್ತಿನ ಲಸಿಕೆ ಹಾಕಬೇಕಿದೆ. ಇಲಾಖೆ ಅಧಿಕಾರಿಗಳು, ಸಿಬ್ಬಂದಿ, ಮೈತ್ರಿ ಕಾರ್ಯಕರ್ತರು, ಪಶು ಸಖಿಯರು ಅಭಿಯಾನದಲ್ಲಿ ಪಾಲ್ಗೊಳ್ಳಬೇಕು ಎಂದು ಹೇಳಿದರು. ಮೈರಾಡ್ ಸಂಸ್ಥೆ ಜಿಲ್ಲಾ ಸಂಯೋಜಕ ದುರಗಪ್ಪ ಮಾತನಾಡಿ, ಭಾರತ ಸಂಜೀವಿನಿ ಕರ್ನಾಟಕ ಯೋಜನೆಯಡಿ ತಾಲೂಕಿನಲ್ಲಿ ಜಾನುವಾರುಗಳಿಗೆ ಕೃತಕ ಗರ್ಭಧಾರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಬಿಎಫ್‌ಐಎಲ್ ಯೋಜನೆಯಡಿ ಇಂಡೋಸ್ ಇಂಡ್ ಆರ್ಥಿಕ ನೆರವು ಮತ್ತು ಪಶು ಇಲಾಖೆ ಸಹಯೋಗದಲ್ಲಿ ನಡೆಯಲಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು. ಕಾರ್ಯಕರ್ತರಿಗೆ ಮತ್ತು ಪಶು ಸಖಿಯರಿಗೆ ಪ್ರಚಾರದ ಕಿಟ್ ಮತ್ತು ಬ್ಯಾಗ್, ಕೀ ಚೈನ್ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net