

ವಿಜಯವಾಣಿ ಸುದ್ದಿಜಾಲ ಧಾರವಾಡ
ಪ್ರಸ್ತುತ ಉದ್ಯೋಗ ಮಾರುಕಟ್ಟೆಗೆ ಬೇಕಾಗುವ ಕೌಶಲ, ಸೃಜನಶೀಲ, ಜ್ಞಾನ ಮತ್ತು ಅಧ್ಯಯನದಲ್ಲಿ ಅರ್ಪಣಾ ಮನೋಭಾವ ಹೊಂದಿದಾಗ ಮಾತ್ರ ಯಶಸ್ಸು ಪಡೆಯಲು ಸಾಧ್ಯ ಎಂದು ಕರ್ನಾಟಕ ಕಲಾ ಕಾಲೇಜಿನ ಪ್ರಾಚಾರ್ಯ ಡಾ.ಡಿ.ಬಿ.ಕರಡೋಣಿ ಹೇಳಿದರು.
ನಗರದ ಕರ್ನಾಟಕ ವಿಜ್ಞಾನ ಕಾಲೇಜಿನ ಸಂಖ್ಯಾಶಾಸ್ತ್ರ ಅಧ್ಯಯನ ವಿಭಾಗವು ಕಾಲೇಜಿನ ಸಭಾಂಗಣದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಪ್ರಥಮ ಪದವಿ ವರ್ಷದ ವಿದ್ಯಾರ್ಥಿಗಳ ಪುನಶ್ಚೇತನ ಕಾರ್ಯಕ್ರಮ ಮತ್ತು ಮಹಾಲಾನೋಬಿಸ್ ಸ್ಟಡಿ ಸರ್ಕಲ್ ಶೈಕ್ಷಣಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಸಿಕ್ಕ ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಪ್ರಸ್ತುತ ಸ್ಪರ್ಧಾತ್ಮಕ ಯುಗದಲ್ಲಿ ಆಳವಾದ ಅಧ್ಯಯನದೊಂದಿಗೆ ಉತ್ತಮ ಜ್ಞಾನ ಹೊಂದಲು ಪ್ರಯತ್ನಿಸಬೇಕು. ವಿಷಯದ ಜತೆಗೆ ಸಾಹಿತ್ಯವನ್ನು ಅಧ್ಯಯನ ಮಾಡಬೇಕು ಎಂದರು.
ಡಾ.ಆರ್.ವೈ.ಬೂದಿಹಾಳ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಡಾ. ಮಂಜಲಿ ಸಾಳುಂಕೆ ಮಾತನಾಡಿದರು. ಸಂಖ್ಯಾಶಾಸ್ತ್ರದ ಪ್ರಥಮ ವರ್ಷದ ವಿದ್ಯಾರ್ಥಿಗಳು ಅನಿಸಿಕೆ ಹಂಚಿಕೊಂಡರು. ಡಾ.ಮುಕುಂದ ಲಮಾಣಿ, ಡಾ.ಶ್ರೀಶೈಲ ಗಣಿ, ಡಾ. ಎಂ.ಎನ್.ಮ್ಯಾಗೇರಿ, ಡಾ.ಕೀರ್ತಿ ಅಷ್ಟಗಿಮಠ, ಡಾ.ಶ್ರೀದೇವಿ ಹಾಲವರ,ಡಾ.ಶ್ವೇತಾ, ಡಾ.ಭಿಮಣ್ಣ, ಇತರರು ಇದ್ದರು.