ಕುರುಗೋಡು: ಆ.15ರಂದು ರಂದು ನಡೆಯುವ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆ ಕೈಗೊಳ್ಳಬೇಕಾದ ಪೂರ್ವ ಸಿದ್ಧತಾ ಕ್ರಮದ ಪೂರ್ವಭಾವಿ ಸಭೆ ಇಲ್ಲಿನ ತಾಲೂಕು ಆಡಳಿತ ಕಚೇರಿಯಲ್ಲಿ ಶುಕ್ರವಾರ ನಡೆಯಿತು.
ಆಚರಣೆ ಸಮಿತಿ ಅಧ್ಯಕ್ಷ ತಹಸೀಲ್ದಾರ್ ನರಸಪ್ಪ ಮಾತನಾಡಿ, ಹಲವು ಮಹಾತ್ಮರ ತ್ಯಾಗ, ಬಲಿದಾನಗಳಿಂದ ದೊರೆತ ಸ್ವಾತಂತ್ರ್ಯವನ್ನು ಕಾಪಾಡಿಕೊಳ್ಳಬೇಕು. ಅಲ್ಲದೆ ಸ್ವಾತಂತ್ರ ಹೋರಾಟದ ನೆನಪುಗಳನ್ನು ಯುವಪೀಳಿಗೆಗೆ ಮುಟ್ಟಿಸುವ ಮೂಲ ಚರಿತ್ರೆ ಜೀವಂತವಾಗಿರಬೇಕಿದೆ.
ಹೀಗಾಗಿ ದಿನಾಚರಣೆಗಳು ಮೌಲ್ಯಯುತವಾಗಿರಬೇಕು. ಅಂದು ನಗರದಲ್ಲೆಲ್ಲ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಪ್ರಮುಖ ವೃತ್ತಗಳಲ್ಲಿ ದೀಪಾಲಂಕಾರ ಮಾಡಬೇಕಿದ್ದು, ಎಲ್ಲ ಸರ್ಕಾರಿ, ಖಾಸಗಿ ಕಚೇರಿಗಳು ಕಡ್ಡಾಯವಾಗಿ ಧ್ವಜ ಹಾರಿಸಬೇಕಲ್ಲದೆ ಧ್ವಜಾರೋಹಣದ ಬಗ್ಗೆ ನಿಗಾ ವಹಿಸಬೇಕು ಎಂದು ನರಸಪ್ಪ ತಿಳಿಸಿದರು.