ಆರೋಗ್ಯ ತಪಾಸಣಾ ಶಿಬಿರ ಸದುಪಯೋಗವಾಗಲಿ

5 TKE 2(1)
Published on

ತರೀಕೆರೆ: ಆರೋಗ್ಯ ಇಂದು ಎಲ್ಲರಿಗೂ ಅವಶ್ಯಕ ಎಂದು ಕಾಡಾ ಪ್ರಾಧಿಕಾರದ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್ ಹೇಳಿದರು.

ಪಟ್ಟಣದ 17ನೇ ವಾರ್ಡ್‌ನ ಆರೋಗ್ಯ ಕೇಂದ್ರದಲ್ಲಿ ಸೂಫಿ ಸಂತ ಹಜ್ರತ್ ಖ್ವಾಜಾ ಮೊಹಿನುದ್ದೀನ್ ಹಸನ್ ಚಿಸ್ತಿ ಅಜ್ಮೀರ್ ರವರ 813ನೇ ಉರುಸ್ ಹಿನ್ನೆಲೆಯಲ್ಲಿ ಏರ್ಪಡಿಸಿದ್ದ ಉಚಿತ ಹೃದಯ, ನರರೋಗ, ಕೀಲು ಮತ್ತು ಮೂಳೆ ರೋಗ ತಪಾಸಣಾ ಹಾಗೂ ಸ್ವಯಂಪ್ರೇರಿತ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿ, ಬಡವರು ಉಚಿತ ಆರೋಗ್ಯ ತಪಾಸಣಾ ಶಿಬಿರಗಳ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.

ಶಾಸಕ ಜಿ.ಎಚ್.ಶ್ರೀ ನಿವಾಸ್ ಮಾತನಾಡಿ, ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಸಿಎಸ್‌ಆರ್ ಅನುದಾನದಲ್ಲಿ 1 ಕೋಟಿ ರೂ. ವೆಚ್ಚದಲ್ಲಿ ಅತ್ಯಾಧುನಿಕ ಉಪಕರಣ ಅಳವಡಿಸಲಾಗಿದೆ. 100 ಬೆಡ್‌ಗಳ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಆರಂಭಕ್ಕೆ ಕ್ರಮವಹಿಸಲಾಗಿದೆ ಎಂದು ತಿಳಿಸಿದರು.

ಪುರಸಭೆ ಸದಸ್ಯ ಟಿ.ದಾದಾಪೀರ್ ಮಾತನಾಡಿ, ಭಾರತದಲ್ಲಿ ಸಂತ ಖ್ವಾಜಾ ಗರೀಬ್ ನವಾಜ್ ಸೇರಿ ಅನೇಕರು ಬಡವರ ಕಲ್ಯಾಣಕ್ಕಾಗಿ ಶ್ರಮಿಸಿ ಸಮಾಜಕ್ಕೆ ಮೇಲ್ಪಂಕ್ತಿ ಹಾಕಿದ್ದಾರೆ. ಅವರ ಹಾದಿಯಲ್ಲಿ ಪ್ರತಿಯೊಬ್ಬರು ಸಾಗಬೇಕು ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net