ರೈತರ ಜಮೀನು ಕಾಗದ ಪತ್ರಗಳನ್ನು ಮೂಲ ದಾಖಲೆಯಂತೆ ಮಾಡಿ

6byd2- farmer
Published on

ಬ್ಯಾಡಗಿ: ರೈತರ ಜಮೀನಿನ ಪಹಣಿ ಪತ್ರಗಳಲ್ಲಿರುವ ವಕ್ಪ ಆಸ್ತಿಯನ್ನು ಕೂಡಲೇ ತಿದ್ದುಪಡಿ ಮಾಡಿ ಮೂಲ ದಾಖಲಾತಿಯಂತೆ ಮಾಡಿಕೊಡಬೇಕು ಎಂದು ಆಗ್ರಹಿಸಿ ತಾಲೂಕು ರೈತ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಲು ಯತ್ನಿಸಿದ ಘಟನೆ ಬುಧವಾರ ನಡೆಯಿತು.

ಈ ವೇಳೆ ರೈತರ ಬಳಿ ಆಗಮಿಸಿದ ತಹಸೀಲ್ದಾರ ಫೀರೋಜ್ ಷಾ ಸೋಮನಕಟ್ಟೆ, ರೈತರನ್ನು ಸಮಾಧಾನಪಡಿಸಿ ತಮ್ಮ ಸಭಾಂಗಣದಲ್ಲಿ ಸಭೆ ನಡೆಸಿದರು.

ಈ ವೇಳೆ ಮಾತನಾಡಿದ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ, 112 ಪ್ರಕರಣಗಳಲ್ಲಿ ಕಾಲಂ 11 ರಲ್ಲಿ ಮೂಲ ರೈತರು ಪರಭಾರೆ ಮಾಡಬಾರದು ಎಂದು ಸಭೆಯ ಮೂಲಕ ಆಗ್ರಹಿಸಿದರು. ಒಂದು ವೇಳೆ ಬ್ಯಾಡಗಿ ಸೇರಿ ಜಿಲ್ಲೆಯ ಯಾವುದೇ ತಾಲೂಕಿನಲ್ಲಿ ಇಂತಹ ತಿದ್ದುಪಡಿಗೆ ಮುಂದಾದಲ್ಲಿ ಅನ್ಯಾಯಕ್ಕೊಳಪಟ್ಟ ಕುಟುಂಬಗಳೊಂದಿಗೆ ರೈತ ಸಂಘವು ಸರ್ಕಾರ ಹಾಗೂ ಅಧಿಕಾರಿಗಳ ವಿರುದ್ದ ಪ್ರತಿಭಟನೆ ಹಮ್ಮಿಕೊಳ್ಳಲಿದೆ ಎದಂದು ಎಚ್ಚರಿಸಿದರು.

ಈ ವೇಳೆ ಮೌನೇಶ ಕಮ್ಮಾರ, ಶಂಕರ ಮರಿಗಾಲ, ಶಿವರುದ್ರಪ್ಪ ಮೂಡೇರ, ಮಲ್ಲೇಶಪ್ಪ ಡಂಬಳ, ಪ್ರಕಾಶ ಸಿದ್ದಮ್ಮನವರ, ನಂಜುಂಡಸ್ವಾಮಿ ಮೋಟೆಬೆನ್ನೂರು, ಚನ್ನಬಸಪ್ಪ ತಳಮನಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net