ಮಕ್ಕಳನ್ನು ಸುಸಂಸ್ಕೃತ ಪ್ರಜೆಗಳನ್ನಾಗಿಸಿ

kle edu
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಮಕ್ಕಳನ್ನು ಸುಸಂಸ್ಕೃತ ಪ್ರಜೆಗಳನ್ನಾಗಿ ರೂಪಿಸುವುದು ಶಿಕ್ಷಣದ ಇಂದಿನ ಅವಶ್ಯಕತೆಯಾಗಿದೆ ಎಂದು ಪತ್ರಕರ್ತ ರಂಜಾನ ದರ್ಗಾ ಹೇಳಿದರು.

ಹುಬ್ಬಳ್ಳಿಯ ಕೆಎಲ್​ಇ ಸಂಸ್ಥೆಯ ಶಿಕ್ಷಣ ಮಹಾವಿದ್ಯಾಲಯದಲ್ಲಿ ಶ್ರೀನಿವಾಸ ಕಲಾ ಸಂಗಮದ ಸಹಯೋಗದೊಂದಿಗೆ ಪ್ರಶಿಕ್ಷಣಾರ್ಥಿಗಳಿಗೆ ಆಯೋಜಿಸಿರುವ ಶೈಕ್ಷಣಿಕ ವಿಷಯಗಳ ನವೀನ ಶೈಲಿಯ ಕಲಿಕೆ ಎಂಬ ಎರಡು ದಿನಗಳ ಕಾರ್ಯಗಾರದ ಉದ್ಘಾಟನಾ ಸಮಾರಂಭದಲ್ಲಿ ಸೋಮವಾರ ಪಾಲ್ಗೊಂಡು ಮಾತನಾಡಿದ ಅವರು, ಶಿಕ್ಷಕರಾದವರು ಯಾವುದೇ ಒತ್ತಡಗಳಿಗೆ ಒಳಗಾಗದೇ ತಮ್ಮ ಜವಾಬ್ದಾರಿಯನ್ನು ನಿಷ್ಠೆಯಿಂದ ನಿರ್ವಹಿಸಬೇಕು ಎಂದರು.

ಅದಮ್ಯ ಚೇತನ ಟ್ರಸ್ಟ್ ಕಾರ್ಯದರ್ಶಿ ಭಾರತಿ ನಂದಕುಮಾರ ಹಾಗೂ ಡಾ. ಶಿರೀಶ ಎಲಿಜಬೆತ್ ಉದ್ಘಾಟಿಸಿದರು. ಶ್ರೀನಿವಾಸ ಕಲಾ ಸಂಗಮದ ಸಂಸ್ಥಾಪಕ ಅಧ್ಯಕ್ಷ ರಾಜಶೇಖರ ಮಾಣಿಕ್ಯಂ ಮಾತನಾಡಿದರು. ಪ್ರಾಚಾರ್ಯ ಡಾ. ಲಿಂಗರಾಜ ಮುಳ್ಳಳ್ಳಿ ಅಧ್ಯಕ್ಷತೆ ವಹಿಸಿದ್ದರು. ಡಾ ಜಯಶ್ರೀ ಕುಂದಗೋಳಮಠ, ಕೃತಿಕಾ ಭಾವಿಕೇರಿ ಪರಿಚಯಿಸಿದರು. ವರ್ಷಿಣಿ ಕುಲಕರ್ಣಿ ಕಾರ್ಯಕ್ರಮ ನಿರ್ವಹಿಸಿದರೆ, ಫಕ್ಕಿರವ್ವ ಹೊಂಬಳ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net