ತಪ್ಪದೇ ಕಾರ್ಮಿಕ ಕಾರ್ಡ್ ಮಾಡಿಸಿಕೊಳ್ಳಿ

Make sure to get a labor card.
ಮಹಾಲಿಂಗಪುರದ ಬಸವನಗರದ ಬಸವ ಸಮುದಾಯ ಭವನದಲ್ಲಿ ಸಿ.ಎಂ. ಹುರಕಡ್ಲಿ ೌಂಡೇಶನ್ ಹಾಗೂ ಕಾರ್ಮಿಕ ಇಲಾಖೆ ಮುಧೋಳ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಹಿಳಾ ಕಾರ್ಮಿಕರಿಗೆ ಕಾರ್ಮಿಕ ಕಾರ್ಡ ವಿತರಿಸಲಾಯಿತು. ಕಾರ್ಮಿಕ ಇಲಾಖೆ ಅಧಿಕಾರಿ ರಮೇಶ ಸುಂಬಡ, ಚನಬಸು ಹುರಕಡ್ಲಿ, ಶ್ರೀಶೈಲಪ್ಪ ಉಳ್ಳಾಗಡ್ಡಿ ಇದ್ದರು.
Published on

ಮಹಾಲಿಂಗಪುರ: ಅಸಂಘಟಿತ ಕಾರ್ಮಿಕ ವಲಯದ ಅನುಕೂಲತೆಗೆ ಕಾರ್ಮಿಕ ಕಾರ್ಡ್ ಅಗತ್ಯವಾಗಿದೆ. ಆ ಹಿನ್ನೆಲೆಯಲ್ಲಿ 18 ರಿಂದ 60 ವರ್ಷದ ಒಳಗಿನ ಅಸಂಘಟಿತ ಕಾರ್ಮಿಕರಿಗೆ ಕಾರ್ಮಿಕ ಕಾರ್ಡ್ ಮಾಡಿಸಿಕೊಳ್ಳಲು ಅವಕಾಶವಿದ್ದು, ಎಲ್ಲ ಕಾರ್ಮಿಕರು ಕಾರ್ಡ್ ಮಾಡಿಸಿಕೊಳ್ಳಿ ಎಂದು ಜಿಲ್ಲಾ ಕಾರ್ಮಿಕ ಇಲಾಖೆ ಅಧಿಕಾರಿ ರಮೇಶ ಸುಂಬಡ ಹೇಳಿದರು.

ಸ್ಥಳೀಯ ಬಸವನಗರದ ಬಸವ ಸಮುದಾಯ ಭವನದಲ್ಲಿ ಸಿ.ಎಂ. ಹುರಕಡ್ಲಿ ೌಂಡೇಶನ್ ಹಾಗೂ ಕಾರ್ಮಿಕ ಇಲಾಖೆ ಮುಧೋಳ ಸಹಯೋಗದಲ್ಲಿ ಅಂಬೇಡ್ಕರ್ ಸಹಾಯ ಹಸ್ತ ಯೋಜನೆ ಅಡಿಯಲ್ಲಿ ಶನಿವಾರ ಆಯೋಜಿಸಿದ್ದ ಮಹಿಳಾ ಹೊಲಿಗೆ ಕಾರ್ಮಿಕರಿಗೆ ಕಾರ್ಮಿಕ ಕಾರ್ಡ್ ವಿತರಣೆ ಮತ್ತು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅಧಿಕ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇ-ಶ್ರಮ ಕಾರ್ಡ್ ಕೂಡ ಉಪಯುಕ್ತವಾಗಿದ್ದು, ಯಾವುದೇ ಅಪಘಾತಕ್ಕೆ ಒಳಗಾದರೆ ಈ ಕಾರ್ಡ್‌ನಿಂದ 5 ಲಕ್ಷ ರೂ. ವರೆಗೆ ಪರಿಹಾರ ದೊರಕುವುದು ಎಂದರು.

ಹುರಕಡ್ಲಿ ೌಂಡೇಶನ್ ಸಂಸ್ಥಾಪಕ ಚನಬಸು ಹುರಕಡ್ಲಿ ಮಾತನಾಡಿ, ಹಲವಾರು ವರ್ಷಗಳಿಂದ ನಮ್ಮ ೌಂಡೇಷನ್ ವತಿಯಿಂದ ಬಡ ಜನರಿಗೆ ಕೂಲಿ ಕಾರ್ಮಿಕರಿಗೆ ಅನೇಕ ಸೌಲಭ್ಯಗಳನ್ನು ಒದಗಿಸುವ ಕಾರ್ಯ ನಡೆಸುತ್ತಾ ಬಂದಿದ್ದೇವೆ. ಮಹಿಳೆಯರಿಗೆ ಉಚಿತ ಹೊಲಿಗೆ ಕ್ಲಾಸ್ ಮೂಲಕ ತರಬೇತಿ ನೀಡಿ, ಕಾರ್ಮಿಕ ಕಾರ್ಡ್ ಸೌಲಭ್ಯ ದೊರೆಯುವಂತೆ ಮಾಡಲಾಗಿದೆ ಎಂದರು.

ಚನ್ನಬಸವ ಗುರೂಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಸೌಮ್ಯಾ ಹುರಕಡ್ಲಿ ಮಾತನಾಡಿದರು.

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಶ್ರೀಶೈಲಪ್ಪ ಉಳ್ಳಾಗಡ್ಡಿ, ಸವಿತಾ ಹುರಕಡ್ಲಿ, ಶ್ರೀಶೈಲ ಬಾಡನವರ, ಶಿವಲಿಂಗ ಟಿರಕಿ, ಮಂಜು ಬಕರೆ, ಈರಪ್ಪ ಕಡಕೋಳ, ಮಹಾಲಿಂಗ ಟಿರಕಿ, ಕುಮಾರ ಮಾದರ, ಮಲ್ಲಪ್ಪ ತೇಲಿ, ಗೋವಿಂದಗೌಡ ಪಾಟೀಲ, ಮಹೇಶ ಮನ್ನಯ್ಯನವರಮಠ, ರಾಜೇಂದ್ರ ನಾವಿ, ಉಮಾ ಪೂಜೇರಿ, ರಾಜೇಶ್ವರಿ ಗಿರಿಸಾಗರ, ಸಂತೋಷ ಭಜಂತ್ರಿ, ಗಜಾನನ ಶಿರೋಳ, ಬಸವರಾಜ ಗಿರಿಸಾಗರ, ರವಿ ಗಿರಿಸಾಗರ, ಕುಮಾರ ಮನವಡೆ ಮತ್ತಿತರರಿದ್ದರು. ಎಂ.ಡಿ. ಆನಂದ ಪ್ರಾರ್ಥಿಸಿದರು. ಚಂದ್ರಶೇಖರ್ ಮೋರೆ ನಿರೂಪಿಸಿ, ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net