

ವಿಜಯವಾಣಿ ಸುದ್ದಿಜಾಲ ಧಾರವಾಡ
ಪರಿಸರ ಅಧ್ಯಯನವು ಇಂದು ವಿಜ್ಞಾನದ ಒಂದು ಭಾಗವಾಗಿದ್ದು, ಪರಿಸರದ ಸುಸ್ಥಿರತೆ ಕಾಪಾಡಲು ವಿದ್ಯಾರ್ಥಿಗಳು ಶಾಲಾ ಹಂತದಿಂದಲೇ ಕಾರ್ಯ ಪ್ರವೃತ್ತರಾಗಬೇಕು ಎಂದು ಕರ್ನಾಟಕ ವಿದ್ಯಾವರ್ಧಕ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ವೀರಣ್ಣ ಒಡ್ಡೀನ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದ ಮಕ್ಕಳ ಮಂಟಪವು ಕುರಬಗಟ್ಟಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಮಕ್ಕಳಿಗೆ ಇತ್ತೀಚೆಗೆ ಆಯೋಜಿಸಿದ್ದ ಮಕ್ಕಳಿಗೆ ಚಿತ್ರಕಲೆ, ಭಾಷಣ ಹಾಗೂ ಉಪನ್ಯಾಸ ಕಾರ್ಯಕ್ರಮದಲ್ಲಿ ಪರಿಸರ ರಕ್ಪಣೆಯಲ್ಲಿ ವಿದ್ಯಾಥಿರ್ಗಳ ಪಾತ್ರ ಕುರಿತು ಉಪನ್ಯಾಸ ನೀಡಿದರು.
ಇಡೀ ವರ್ಷ ವಿದ್ಯಾರ್ಥಿಗಳು ಪರಿಸರ ರಕ್ಪಣೆಗೆ ಬದ್ಧರಾಗಿರಬೇಕು. ಪರಿಸರ ಸ್ನೇಹಿ ವಸ್ತುಗಳ ಬಳಕೆಗೆ ಆದ್ಯತೆ ನೀಡಬೇಕು. ಪರಿಸರದ ಬಗ್ಗೆ ನಿರಂತರ ಜಾಗೃತಿ ಮೂಡಿಸಲು ಬೀದಿ ನಾಟಕ, ಉಪನ್ಯಾಸ, ಚಿತ್ರ ಪ್ರದರ್ಶನ, ಶಿಬಿರಗಳನ್ನು ಆಯೋಜಿಸಿ ಪರಿಸರ ಪ್ರೇಮಿಗಳನ್ನಾಗಿಸಬೇಕು. ವಿದ್ಯಾಥಿರ್ಗಳು ಶಾಲೆ, ವಾಸಿಸುವ ಮನೆ, ಸುತ್ತಮುತ್ತಲು ಮರಗಿಡ ಬೆಳೆಸಿ ಪರಿಸರದ ಸಮತೋಲನೆ ಕಾಪಾಡಬೇಕು ಎಂದರು.
ಮುಖ್ಯಾಧ್ಯಾಪಕಿ ಸರಸ್ವತಿ ನಾಯಕ, ಚನ್ನಬಸಪ್ಪ ಲಗಮಣ್ಣವರ ಮಾತನಾಡಿದರು. ಪುಂಡಲೀಕ ಗುಂಡಗೋವಿ ಅಧ್ಯಕ್ಷತೆ ವಹಿಸಿದ್ದರು. ನಾಗಮ್ಮ ಮಾಳಗಿಮನಿ, ಡಾ. ಎಸ್.ಎ. ಗಾಡಗೋಳಿ, ಎಸ್.ಜಿ. ಪಾಟೀಲ, ಮಂಜುಳಾ ಪಿ.ಜಿ, ಪೂಜಾ ಹಿರೇಮಠ, ಮಹಾಂತೇಶ ನರೇಗಲ್, ಕೃಷ್ಣಾ ಅಂಗಡಿ, ಇತರರು ಇದ್ದರು.
ಚಿತ್ರಕಲೆ ಮತ್ತು ಭಾಷಣ ಸ್ಪರ್ಧೆ ವಿಜೇತ ಮಕ್ಕಳಿಗೆ ಬಹುಮಾನ ನೀಡಲಾಯಿತು. ಮಧುಮತಿ ಶಿವಪುರ ಸ್ವಾಗತಿಸಿದರು. ಡಾ. ಧನವಂತ ಹಾಜವಗೋಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀಧರ ಗಸ್ತಿ ನಿರೂಪಿಸಿದರು. ಸುಮಂಗಲಾ ಡಿ.ಕೆ. ವಂದಿಸಿದರು.