ಚಿಕ್ಕಮಗಳೂರಿನಲ್ಲಿ ಲಾರಿ ನಿಲ್ದಾಣಕ್ಕೆ ಜಾಗ ಕಲ್ಪಿಸಿ

lori manavi
ಚಿಕ್ಕಮಗಳೂರಿನಲ್ಲಿ ಲಾರಿ ಚಾಲಕ ಸಂಘದ ಸದಸ್ಯರು ಜಿಲ್ಲಾಧಿಕಾರಿ ಮೀನಾ ನಾಗರಾಜ್‌ಗೆ ಮನವಿ ಸಲ್ಲಿಸಿದರು. ಅಧ್ಯಕ್ಷ ಸೋಮಾನಾಯಕ್, ಯೂಸೂಫ್, ಸಮೀರ್, ಭಾಷಾ, ಅಯೂಬ್ ಇದ್ದರು.
Published on

ಚಿಕ್ಕಮಗಳೂರು: ನಗರದಲ್ಲಿ ಲಾರಿ ನಿಲ್ದಾಣಕ್ಕೆ ಸೂಕ್ತ ಸ್ಥಳ ನಿಗದಿಪಡಿಸುವಂತೆ ಒತ್ತಾಯಿಸಿ ಲಾರಿ ಚಾಲಕ ಸಂಘದ ಸದಸ್ಯರು ಶುಕ್ರವಾರ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅವರಿಗೆ ಮನವಿ ಸಲ್ಲಿಸಿದರು.

ಸಂಘದ ಅಧ್ಯಕ್ಷ ಸೋಮಾನಾಯಕ್ ಮಾತನಾಡಿ, ಲಾರಿಗಳನ್ನು ನಿಲ್ಲಿಸಲು ನಗರದಲ್ಲಿ ಸುಸಜ್ಜಿತ ನಿಲ್ದಾಣ ನಿರ್ಮಿಸಿಕೊಡಬೇಕು. ಭಾರಿ ಗಾತ್ರದ ವಾಹನಗಳು ನಗರದಲ್ಲಿ ಸಂಚರಿಸದಂತೆ ನಿಬರ್ಂಧ ಹೇರಲಾಗಿದೆ. ಇದರಿಂದಾಗಿ ಲಾರಿಗಳಿಗೆ ಬಾಡಿಗೆ ಸಿಗುತ್ತಿಲ್ಲ. ನಗರ ಸಮೀಪದಲ್ಲಿ ರಾಷ್ಟ್ರೀಯ ಹೆದ್ದಾರಿಗಳು ಇದ್ದರೂ ಟರ್ಮಿನಲ್ ಇಲ್ಲ. ಈ ವಿಚಾರವಾಗಿ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಲಾರಿ ಚಾಲಕರು ಮತ್ತು ಮಾಲೀಕರಿಗೆ ಮನೆ ನಿರ್ಮಿಸಿಕೊಡಬೇಕು. ಲಾರಿ ಮಾಲೀಕರಲ್ಲಿ ಬಹಳಷ್ಟು ಜನ ಬಡವರಿದ್ದಾರೆ. ಅವರಿಗೆ ಸ್ವಂತ ಸೂರಿಲ್ಲ ಎಂದು ತಿಳಿಸಿದರು.
ಸಂಘದ ಉಪಾಧ್ಯಕ್ಷ ಯೂಸೂಫ್, ಕಾರ್ಯದರ್ಶಿ ಅಯೂಬ್, ಸಂಘಟನಾ ಕಾರ್ಯದರ್ಶಿ ಸಮೀರ್, ಭಾಷಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net