ಶರಣಪ್ರಕಾಶ ಪಾಟೀಲ್‌ಗೆ ಮುಖ್ಯಮಂತ್ರಿ ಮಾಡಿ: ಹಿರಿಯ ಮುಖಂಡ ವೆಂಕಟೇಶ ಆಗ್ರಹ

ವೆಂಕಟೇಶ ಸುಲೇಪೇಟ
Published on

ಚಿಂಚೋಳಿ: ಕಲ್ಯಾಣ ಕರ್ನಾಟಕದ ವೀರಶೈವ ಲಿಂಗಾಯತ ಪ್ರಭಾವಿ ನಾಯಕ, ಜನರ ಆಶಾಕಿರಣ, ಅಭಿವೃದ್ಧಿಯ ಹರಿಕಾರ, ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯ ಅಭಿವೃದ್ಧಿ ಸಚಿವ ಶರಣಪ್ರಕಾಶ ಪಾಟೀಲ್ ಅವರಿಗೆ ಹೈಕಮಾಂಡ್​ ಪರಿಗಣಿಸಿ ಮುಖ್ಯಮಂತ್ರಿ ಸ್ಥಾನ ಕಲ್ಪಿಸಬೇಕು ಎಂದು ಕಾಂಗ್ರೇಸ್ ಹಿರಿಯ ಮುಖಂಡ ವೆಂಕಟೇಶ ಸುಲೇಪೇಟ ಸರಕಾರಕ್ಕೆ ಮನವಿ ಮಾಡಿದ್ದಾರೆ.

ರಾಜ್ಯದಲ್ಲಿಯೇ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ನಂತರ ಅತಿ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದ ಜನ ನಾಯಕರಾಗಿದ್ದು, ಒಂದು ವೇಳೆ ಸರಕಾರವು ಮುಖ್ಯಮಂತ್ರಿ ಮಾಡಿದರೇ ಸುಲೇಪೇಟ ಖಟ್ವಾಂಗೇಶ್ವರ ಮಠದಿಂದ ಸುಲೇಪೇಟ ಕೊತ್ತಲಬಸವೇಶ್ವರ ಮಂದಿರದ ವರೆಗೆ ಬೃಹತ್ ಪಾದಯಾತ್ರೆ ಮಾಡುವುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net