

ಚಿತ್ರದುರ್ಗ: ಎಂಬಿಬಿಎಸ್ ಹಾಗೂ ಪಿಜಿ ವೈದ್ಯರ ಗ್ರಾಮೀಣ ಸೇವೆಯನ್ನು ಕ್ರಮವಾಗಿ 2 ಮತ್ತು 1 ವರ್ಷದ ಅವಧಿಗೆ ಕಡ್ಡಾಯಗೊಳಿಸುವಂತೆ ಶಾಸಕ ಎಂ.ಚಂದ್ರಪ್ಪ ಅವರು ಸಚಿವ ಡಾ.ಶರಣಪ್ರಕಾಶ್ ಆರ್.ಪಾಟೀಲ ಅವರಲ್ಲಿ ವಿನಂತಿಸಿದರು.
ಸರ್ಕಾರಿ ಮೆಡಿಕಲ್ ಕಾಲೇಜು ನಿರ್ಮಾಣ ಹಿನ್ನೆಲೆಯಲ್ಲಿ ಜಿಪಂ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದರು.
ಪ್ರತಿಕ್ರಿಯಿಸಿದ ಸಚಿವರು, ಈಗಾಗಲೇ ಈ ನಿಯಮ ಜಾರಿಯಲ್ಲಿದೆ. ಒಂದು ವರ್ಷ ವೈದ್ಯರಿಗೆ ಕಡ್ಡಾಯ ಸೇವೆ ಇದೆ ಎಂದು ಮಾಹಿತಿ ನೀಡಿದರು.