

ಕುಂದಾಪುರ: ವಿದ್ಯಾರ್ಥಿಗಳು ಶಾಲೆಯಲ್ಲಿ ಸಿಗುವ ಸೌಲಭ್ಯಗಳನ್ನು ಸರಿಯಾಗಿ ಬಳಸಿಕೊಂಡು ಉತ್ತಮ ರೀತಿಯಲ್ಲಿ ಕಲಿಯಬೇಕು ಎಂದು ಉದ್ಯಮಿ ಜಿ.ಎಂ.ಚೆರಿಯಬ್ಬ ಸಾಹೇಬ್ ಹೇಳಿದರು.
ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವಾವಿನಕಟ್ಟೆ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿ ಸರ್ಕಾರ ಉದ್ಘಾಟಿಸಿ ಮಾತನಾಡಿದರು. ಕರ್ಕುಂಜೆ ಗ್ರಾ.ಪಂ. ಉಪಾಧ್ಯಕ್ಷ ಸಂತೋಷ್ ಪೂಜಾರಿ, ವಿದ್ಯಾರ್ಥಿ ಸರ್ಕಾರದ ವಾರ್ಗದರ್ಶಿ ಶಿಕ್ಷಕ ರವಿಶಂಕರ್ ಹೆಗ್ಡೆ ವಾತನಾಡಿದರು. ಮುಖ್ಯಶಿಕ್ಷಕಿ ಬೇಬಿ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಹಳೇ ವಿದ್ಯಾರ್ಥಿ, ಗುಲ್ವಾಡಿ ಗ್ರಾ.ಪಂ. ವಾಜಿ ಅಧ್ಯಕ್ಷ ಸುಧೀಶ್ ಕುವಾರ್ ಶೆಟ್ಟಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪ್ರವಾಣವಚನ ಬೋಧಿಸಿದರು. ಶಿಕ್ಷಕ ಭಾಸ್ಕರ ಭಟ್ಟ ಸ್ವಾಗತಿಸಿದರು. ಅನಿತಾ ವಂದಿಸಿದರು. ಪ್ರಶಾಂತ ಶಾನುಭೋಗ, ಪ್ರಕಾಶ ಶೆಟ್ಟಿ, ಅನುಪವಾ, ಶಾಜಿ, ಪ್ರಮೋದ ಶೆಟ್ಟಿ ವಿವಿಧ ಚಟುವಟಿಕೆ ನಿರ್ವಹಿಸಿದರು. ಬೇಬಿ, ಗಣೇಶ ಸಹಕರಿಸಿದರು. ಗೀತಾ ಎಚ್. ನಿರೂಪಿಸಿದರು.