

ಸಿರಿಗೆರೆ: ಪ್ರತಿ ಮನೆಯ ಯಜಮಾನಿ ಬ್ಯಾಂಕ್ ಖಾತೆಗೆ ನೇರ ಸರ್ಕಾರ 2 ಸಾವಿರ ರೂ. ಜಮೆ ಮಾಡುವ ಗೃಹಲಕ್ಷ್ಮಿ ಯೋಜನೆ ಮಹತ್ವದ್ದಾಗಿದೆ ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಸವರಾಜ್ ಹೇಳಿದರು.
ಸಮೀಪದ ಆಲಘಟ್ಟ ಗ್ರಾಮದಲ್ಲಿ ಬುಧವಾರ ಆಯೋಜಿಸಿದ್ದ ಗೃಹಲಕ್ಷ್ಮಿ ನೇರ ಪ್ರಸಾರ ವೀಕ್ಷಣೆ ಹಾಗೂ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬಡ, ಮಧ್ಯ ಕುಟುಂಬಕ್ಕೆ 2 ಸಾವಿರ ಹಣ ಬಹುದೊಡ್ಡ ಮೊತ್ತ. ಪ್ರತಿ ತಿಂಗಳು ಸರ್ಕಾರ ಹಾಕುವ ಈ ಹಣವನ್ನು ಮಕ್ಕಳ ಶಿಕ್ಷಣ, ಆರೋಗ್ಯ ಸೇರಿ ಅಗತ್ಯಕ್ಕೆ ಬಳಸಬೇಕು. ಸಾಧ್ಯವಾದರೆ ಉಳಿತಾಯ ಮಾಡಲು ಚಿಂತನೆ ಮಾಡಬೇಕು ಎಂದರು.
ಈ ಮೂಲಕ ಆರ್ಥಿಕವಾಗಿ ಸಬಲತೆ ಸಾಧಿಸಿ, ಮುಖ್ಯವಾಹಿನಿಗೆ ಬರಲು ಶ್ರಮಿಸಬೇಕು ಎಂದು ಹೇಳಿದರು.
ಗ್ರಾಪಂ ಉಪಾಧ್ಯಕ್ಷೆ ಲಲಿತಮ್ಮ, ಸದಸ್ಯರಾದ ರಾಮಪ್ಪ, ಕಾರ್ಯದರ್ಶಿ ನಾಗರಾಜ್, ಚಂದ್ರಶೇಖರ್, ಲೋಕೇಶ್ ಇತರರಿದ್ದರು.