ಜನನ, ಮರಣ ನೋಂದಣಿಯಲ್ಲಿ ಪ್ರಗತಿ ಸಾಧಿಸಿ

30-05-Shiva-5
ರಾಯಚೂರಿನ ಜಿ.ಪಂ. ಸಭಾಂಗಣದಲ್ಲಿ ಗ್ರಾ.ಪಂ. ಕಾರ್ಯದರ್ಶಿಗಳು ಮತ್ತು ಕಂಪ್ಯೂಟರ್ ಆಪರೇಟರ್‌ಗಳಿಗೆ ನಾಗರಿಕ ನೋಂದಣಿ ನಿಯಮ ಮತ್ತು ಇ ಜನ್ಮ ತಂತ್ರಾಂಶ ಕುರಿತು ಏರ್ಪಡಿಸಿದ್ದ ತರಬೇತಿ ಕಾರ್ಯಾಗಾರದಲ್ಲಿ ಜಿ.ಪಂ. ಮುಖ್ಯ ಯೋಜನಾಧಿಕಾರಿ ಡಾ.ಟಿ.ರೋಣಿ ಉದ್ಘಾಟಿಸಿದರು. ಜಿಲ್ಲಾ ಯೋಜನಾ ಅಂದಾಜು ಮತ್ತು ವೌಲ್ಯಮಾಪನ ಅಧಿಕಾರಿ ಡಾ.ಹುಲಗಪ್ಪ, ಜಿಲ್ಲಾ ಸಂಗ್ರಣಾಕಾರಿ ಡಾ.ತಿಪ್ಪಣ್ಣ, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಇಲಾಖೆ ಸಹಾಯಕ ನಿರ್ದೇಶಕ ಚನ್ನವೀರಪ್ಪ, ಸಹಾಯಕ ಸಾಂಖಿಕ ಅಧಿಕಾರಿ ನಿಂಗಪ್ಪ ಇದ್ದರು.
Published on

ರಾಯಚೂರು: ಜನನ, ಮರಣ ನೋಂದಣಿಯನ್ನು ಕಡ್ಡಾಯವಾಗಿ ಹಾಗೂ ನಿಗದಿತ ಅವಯಲ್ಲಿ ಶೇ.100ರಷ್ಟು ಸಾಸಲು ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದು ಜಿ.ಪಂ. ಮುಖ್ಯ ಯೋಜನಾಧಿಕಾರಿ ಡಾ.ಟಿ.ರೋಣಿ ಹೇಳಿದರು.
ಸ್ಥಳೀಯ ಜಿ.ಪಂ. ಸಭಾಂಗಣದಲ್ಲಿ ಗ್ರಾ.ಪಂ. ಕಾರ್ಯದರ್ಶಿಗಳು ಹಾಗೂ ಕಂಪ್ಯೂಟರ್ ಆಪರೇಟರ್‌ಗಳಿಗೆ ನಾಗರಿಕ ನೋಂದಣಿ ನಿಯಮ ಹಾಗೂ ಇ ಜನ್ಮ ತಂತ್ರಾಂಶ ಕುರಿತು ಗುರುವಾರ ಏರ್ಪಡಿಸಿದ್ದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಜನನ, ಮರಣಗಳನ್ನು ನೋಂದಣಿ ಮಾಡಲು ಸಂಬಂಧಪಟ್ಟ ಗ್ರಾ.ಪಂ. ಕಾರ್ಯದರ್ಶಿಗಳು ಹಾಗೂ ಕಂಪ್ಯೂಟರ್ ಆಪರೇಟ್‌ಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು. ಯಾವುದೇ ಜನನ ಮತ್ತು ಮರಣ ಮಾಹಿತಿಗಳು ಬಿಟ್ಟು ಹೋಗದಂತೆ ನೋಡಿಕೊಳ್ಳಬೇಕು ಎಂದು ಡಾ.ಟಿ.ರೋಣಿ ಸೂಚಿಸಿದರು.
ಈ ಸಭೆಯಲ್ಲಿ ಜಿಲ್ಲಾ ಯೋಜನಾ ಅಂದಾಜು ಮತ್ತು ವೌಲ್ಯಮಾಪನ ಅಧಿಕಾರಿ ಡಾ.ಹುಲಗಪ್ಪ, ಜಿಲ್ಲಾ ಸಂಗ್ರಣಾಧಿಕಾರಿ ಡಾ.ತಿಪ್ಪಣ್ಣ, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಇಲಾಖೆ ಸಹಾಯಕ ನಿರ್ದೇಶಕ ಚನ್ನವೀರಪ್ಪ, ಸಹಾಯಕ ಸಾಂಖಿಕ ಅಕಾರಿ ನಿಂಗಪ್ಪ, ಶರಣಪ್ಪ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net