ಮೈಸೂರನ್ನು ಪ್ಲಾಸ್ಟಿಕ್, ಧೂಳು ಮುಕ್ತ ನಗರವನ್ನಾಗಿಸಿ

mcc (3)
Published on

ಮೈಸೂರು: ನಗರದ ಅರಮನೆ ಸುತ್ತಮುತ್ತಲಿನ ರಸ್ತೆಗಳನ್ನು ಧೂಳು ಮುಕ್ತ ಹಾಗೂ ನಗರವನ್ನು ಪ್ಲಾಸ್ಟಿಕ ಮುಕ್ತವನ್ನಾಗಿ ಮಾಡಲು ಕ್ರಮ ವಹಿಸ ಬೇಕು ಎಂದು ಕಾಂಗ್ರೆಸ್‌ನ ಅಯೂಬ್ ಖಾನ್ ಒತ್ತಾಯಿಸಿದರು.

ನಾಡಹಬ್ಬ ದಸರಾ ಉತ್ಸವ ಸಮೀಪಿಸುತ್ತಿದ್ದು, ರಸ್ತೆಗಳ ಗುಂಡಿ ಮುಚ್ಚುವ ಕಾಮಗಾರಿ ಕೈಗೊಳ್ಳಬೇಕು. ನಗರದ ಅರಮನೆ ಸುತ್ತಲಿನ ಫುಟ್‌ಪಾತ್‌ಗಳನ್ನು ಅಭಿವೃದ್ಧಿ ಪಡಿಸಬೇಕು. ಪುರಭವನ ಆವರಣದ ಪಾರ್ಕಿಂಗ್ ಕಾಮಗಾರಿ ಕೂಡಲೇ ಪೂರ್ಣಗೊಳಿಸಿ ವಾಹನ ನಿಲುಗಡೆಗೆ ಅವಕಾಶ ನೀಡಬೇಕು ಎಂದು ಮಂಗಳವಾರ ಹಮ್ಮಿಕೊಂಡಿದ್ದ ಪಾಲಿಕೆ ಕೌನ್ಸಿಲ್ ಸಭೆಯಲ್ಲಿ ಆಗ್ರಹಿಸಿದರು.

ರೆವಿನ್ಯೂ ಬಡಾವಣೆಗೆ ಮನೆ ನೀಡಿ:

ಬಡ ವರ್ಗದವರು ಹೆಚ್ಚಿನ ಸಂಖ್ಯೆಯಲ್ಲಿ ರೆವಿನ್ಯೂ ಬಡಾವಣೆಗಳಲ್ಲಿ ವಾಸ ಮಾಡುತ್ತಿದ್ದಾರೆ. ಆದರೆ, ರೆವಿನ್ಯೂ ಬಡಾವಣೆಗಳಿಗೆ ವಸತಿ ಯೋಜನೆಯ ಲಾಭ ದೊರೆಯುತ್ತಿಲ್ಲ. ಬಡವರನ್ನು ಸೌಲಭ್ಯಗಳನ್ನು ಹೊರಗಿಡುವುದು ಸರಿಯಲ್ಲ ಎಂದು ಕಾಂಗ್ರೆಸ್‌ನ ಅಯಾಜ್ ಪಾಷ ಒತ್ತಾಯಿಸಿದರು. ಇದಕ್ಕೆ ಕಾಂಗ್ರೆಸ್‌ನ ಗೋಪಿ, ಜೆಡಿಎಸ್‌ನ ಪ್ರೇಮಾ ಶಂಕರೇಗೌಡ ಧ್ವನಿಗೂಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net