ತಾಯಂದಿರಿಗೆ ಅರಿವು ಮೂಡಿಸಿ

jj
Published on

ಸಂಡೂರು: ತಾಯಿಹಾಲು ಮಗುವಿನಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲಿದೆ ಎಂದು ಗ್ರಾಪಂ ಅಧ್ಯಕ್ಷ ಎ.ವೀರೇಶಪ್ಪ ಹೇಳಿದರು.


ತೋರಣಗಲ್ ಗ್ರಾಪಂ ಕಚೇರಿಯಲ್ಲಿ ಒ.ಪಿ.ಜಿಂದಾಲ್ ನರ್ಸಿಂಗ್ ಕಾಲೇಜ್ ಮತ್ತು ಸಮುದಾಯ ಆರೋಗ್ಯ ಕೇಂದ್ರ, ಗ್ರಾಪಂ ಹಮ್ಮಿಕೊಂಡಿದ್ದ ತಾಯಿಹಾಲಿನ ಮಹತ್ವ ಕುರಿತು ಅರಿವು ಮತ್ತು ಪೂರ್ಣಾವಧಿಯವರೆಗೆ ಶಿಶುಗಳಿಗೆ ಹಾಲು ಕುಡಿಸುವ ಕುರಿತು ಪುನರ್‌ಮನನ ತರಬೇತಿ ಕಾರ್ಯಾಗಾರದಲ್ಲಿ ಶನಿವಾರ ಮಾತನಾಡಿದರು.

ಆಶಾ ಕಾರ್ಯಕರ್ತೆಯರು ಮನೆಗಳಿಗೆ ಭೇಟಿ ನೀಡಿ ತಾಯಂದಿರಿಗೆ ಅರಿವು ನೀಡಲು ಕಾರ್ಯಾಗಾರ ಪ್ರಯೋಜವಾಗಲಿದೆ ಎಂದರು. ಉತ್ತಮ ಕಾರ್ಯನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಬಹಮಾನ ವಿತರಣೆ ಮಾಡಲಾಯಿತು.

ವೈದ್ಯೆ ಪ್ರಿಯಾಂಕಾ, ಪಿಡಿಒ ಹನುಮಂತಪ್ಪ, ಕ್ಷೇತ್ರ ಆರೋಗ್ಯಾಧಿಕಾರಿ ಶಿವಪ್ಪ, ಒ.ಪಿ.ಜಿಂದಾಲ್ ನರ್ಸಿಂಗ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಸಂಧ್ಯಾ ಪ್ರಿಯದರ್ಶಿನಿ, ಆಪ್ತ ಸಮಾಲೋಚಕ ಪ್ರಶಾಂತ್ ಕುಮಾರ್ ಆಶಾ ಕಾರ್ಯಕರ್ತೆಯರಾದ ನೀಲಮ್ಮ, ಭಾಗ್ಯ, ಭಾರತಿ, ಲಕ್ಷ್ಮೀ, ಪಾರ್ವತಿ, ಶಾಂತಮ್ಮ, ತಿಮ್ಮಕ್ಕ, ಆಶಾ, ತೇಜಮ್ಮ, ಶ್ರೀದೇವಿ, ವಿಜಯಲಕ್ಷ್ಮೀ, ಮಾಳಮ್ಮ, ಬಸಮ್ಮ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net