ಅವಕಾಶಗಳ ಸದ್ಬಳಕೆ ಮಾಡಿಕೊಳ್ಳಿ

ಸುಲಭ ಕಲಿಕಾ ಕಾರ್ಯಾಗಾರಕ್ಕೆ ತಾವರಗೇರಾ ಪಪಂ ಉಪಾಧ್ಯಕ್ಷೆ ದುರಗಮ್ಮ ಶಿರವಾಟಿ ಚಾಲನೆ ನೀಡಿದರು. ಕರ್ನಾಟಕ ಪಬ್ಲಿಕ್ ಶಾಲೆಯ ಉಪಪ್ರಾಚಾರ್ಯ ಮಲ್ಲಿಕಾರ್ಜುನ್ ಗೊಣ್ಣಾಗರ್, ಮೆಣೇಧಾಳ ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕಿ ನಿಂಬಮ್ಮ ತುಂಬದ, ಕಿಲಾರಹಟ್ಟಿ ಶಾಲೆ ಮುಖ್ಯಶಿಕ್ಷಕ ರಾಮೇಶ್ವರ ಡಾಣಿ, ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿಗಳಾದ ಕಾಶೀನಾಥ ನಾಗಲೀಕರ್ ಇತರರಿದ್ದರು.

Published on

ತಾವರಗೇರಾ: ವಿದ್ಯಾರ್ಥಿಗಳು ಕೆಟ್ಟ ವಿಚಾರಗಳಿಂದ ಹೊರಬಂದು ಉತ್ತಮ ಬದುಕು ಕಟ್ಟಿಕೊಳ್ಳಬೇಕು ಎಂದು ಸಂಪನ್ಮೂಲ ವ್ಯಕ್ತಿ ಸುಬ್ರಮಣ್ಯ ದಾವಡಿಗೇರ ಹೇಳಿದರು.

ಪಟ್ಟಣದ ಮೇಗಳಪೇಟೆಯ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ದಕ್ಷಿಣಕನ್ನಡ ಜಿಲ್ಲೆ ಯುನಿವರ್ಸಲ್ ನಾಲೆಡ್ಜ್ ಟ್ರಸ್ಟ್ ಮತ್ತು ಗ್ರಾಮ ವಿಕಾಸ ಸಂಸ್ಥೆಯಿಂದ ವಿವಿಧ ಪ್ರೌಢಶಾಲೆಗಳ 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ಮಂಗಳವಾರ ಹಮ್ಮಿಕೊಂಡಿದ್ದ ಸಕಾರಾತ್ಮಕ ಮನೋಭಾವದಿಂದ ಸುಲಭ ಕಲಿಕೆ ಕಾರ್ಯಾಗಾರದಲ್ಲಿ ಮಾತನಾಡಿದರು. ಕರ್ನಾಟಕ ಪಬ್ಲಿಕ್ ಶಾಲೆಯ ಉಪಪ್ರಾಚಾರ್ಯ ಮಲ್ಲಿಕಾರ್ಜುನ್ ಗೊಣ್ಣಾಗರ್, ಪಪಂ ಉಪಾಧ್ಯಕ್ಷೆ ದುರಗಮ್ಮ ಶಿರವಾಟಿ, ಮೆಣೇಧಾಳ ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕಿ ನಿಂಬಮ್ಮ ತುಂಬದ, ಕಿಲಾರಹಟ್ಟಿ ಶಾಲೆ ಮುಖ್ಯಶಿಕ್ಷಕ ರಾಮೇಶ್ವರ ಡಾಣಿ, ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿಗಳಾದ ಕಾಶೀನಾಥ ನಾಗಲೀಕರ್, ಕರ್ನಾಟಕ ಪಬ್ಲಿಕ್ ಶಾಲೆಯ ಎಸ್‌ಡಿಎಂಸಿ ಸದಸ್ಯ ವೆಂಕಟೇಶ ಭಂಗಿ, ಪ್ರಮುಖರಾದ ನೀಲಪ್ಪ ಗೋಡಿ, ಮಲ್ಲಪ್ಪ ಒಲಿ, ಉಮಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net