ಮೌನೇಶ್ವರ ಕ್ಷೇತ್ರ ಪ್ರವಾಸೋದ್ಯಮ ತಾಣವನ್ನಾಗಿ ಮಾಡಿ

Untitled design
ಕಂಪ್ಲಿಯಲ್ಲಿ ಆಯೋಜಿಸಿದ್ದ ವಿಶ್ವಕರ್ಮ ಪೂಜಾ ಮಹೋತ್ಸವ ಸಮಾರಂಭದಲ್ಲಿ ಶಾಸಕ ಜೆ.ಎನ್.ಗಣೇಶ್, ವಿಶ್ವಕರ್ಮ ಸಮಾಜದ ತಾಲೂಕು ಅಧ್ಯಕ್ಷ ಡಿ.ಎ.ರುದ್ರಪ್ಪ ಆಚಾರಿ, ಪದಾಧಿಕಾರಿಗಳಾದ ಡಿ.ಮೌನೇಶ್, ರಾಮಾಚಂದ್ರಾಚಾರ್, ಚಂದ್ರಶೇಖರ್, ನಾಗಲಿಂಗಾಚಾರ್ ಇದ್ದರು.
Published on

ಕಂಪ್ಲಿ: ತಿಂಥಿಣಿ ಮೌನೇಶ್ವರ ಕ್ಷೇತ್ರವನ್ನು ಪ್ರವಾಸೋದ್ಯಮ ತಾಣವನ್ನಾಗಿ ರೂಪಿಸಬೇಕು ಎಂದು ವಿಶ್ವಕರ್ಮ ಸಮಾಜದ ತಾಲೂಕು ಕಾರ್ಯದರ್ಶಿ ಡಿ.ಮೌನೇಶ್ ಹೇಳಿದರು.


ಪಟ್ಟಣದ ಕಾಳಿಕ ಕಮಠೇಶ್ವರ ಭವನದಲ್ಲಿ ಭಾನುವಾರ ಆಯೋಜಿಸಿದ್ದ ವಿಶ್ವಕರ್ಮ ಪೂಜಾ ಮಹೋತ್ಸವ ಸಮಾರಂಭದಲ್ಲಿ ಮಾತನಾಡಿದರು.

ವಿಶ್ವಕರ್ಮ ಸಮುದಾಯದವರಿಗೆ ಸ್ಥಳೀಯ ಆಡಳಿತದಲ್ಲಿ ನಾಮನಿರ್ದೇಶನ ಮಾಡಬೇಕು. ಸರ್ಕಾರದಿಂದ ರಾಜ್ಯಮಟ್ಟದ ವಿಶ್ವಕರ್ಮ ಪ್ರಶಸ್ತಿ ಘೋಷಣೆಯಾಗಬೇಕು. ಸಮಾಜದ ಬೇಡಿಕೆಗಳ ಈಡೇರಿಕೆಗಾಗಿ ಶಾಸಕರು ಸದನದಲ್ಲಿ ಧ್ವನಿ ಎತ್ತಬೇಕು. ವಿಶ್ವಕರ್ಮ ವಿಶ್ವ ವಿದ್ಯಾಲಯ ಆರಂಭಿಸಿ, ಒಳ ಮೀಸಲಾತಿ ನೀಡಬೇಕು. ಕಾಳಿಕ ಕಮಠೇಶ್ವರಿ ದೇವಸ್ಥಾನದ ಅನ್ನಪೂರ್ಣ ಭವನಕ್ಕೆ ಅನುದಾನ ಒದಗಿಸಬೇಕು ಎಂದು ಆಗ್ರಹಿಸಿದರು.


ಶಾಸಕ ಜೆ.ಎನ್.ಗಣೇಶ್ ಮಾತನಾಡಿ, ಸ್ಥಳೀಯ ವಿಶ್ವಕರ್ಮ ಸಮುದಾಯದವರಿಗೆ ಪುರಸಭೆಯಲ್ಲಿ ನಾಮನಿರ್ದೇಶನ ಕಲ್ಪಿಸಲಾಗುವುದು. ಅನ್ನಪೂರ್ಣ ಭವನಕ್ಕೆ ಅನುದಾನ ಒದಗಿಸಲಾಗುವುದು. ಉಳಿದ ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು.


ವಿಶ್ವಕರ್ಮ ಸಮಾಜದ ತಾಲೂಕು ಅಧ್ಯಕ್ಷ ಡಿ.ಎ.ರುದ್ರಪ್ಪ ಆಚಾರಿ, ಪದಾಧಿಕಾರಿಗಳಾದ ರಾಮಾಚಂದ್ರಾಚಾರ್, ಚಂದ್ರಶೇಖರ್, ಕಾಳಾಚಾರ್, ನಾರಾಯಣಾಚಾರ್, ಷಣ್ಮುಖಾಚಾರ್, ಎಂ.ಮಂಜುನಾಥ, ರಾಘವೇಂದ್ರ, ರವಿ, ಕೃಷ್ಣ, ಅಳ್ಳಳ್ಳಿ ಮೌನೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net