ಜೀವ ವಿಮೆ ಅಧಿಕಮಟ್ಟದಲ್ಲಿ ಮಾಡಿಸಿ

Make life insurance higher
ಬಾದಾಮಿಯಲ್ಲಿ ಹಮ್ಮಿಕೊಂಡ ಭಾರತೀಯ ಜೀವ ವಿಮಾ ನಿಗಮದ ಪ್ರತಿನಿಧಿಗಳ ಕ್ಷೇಮಾಭಿವದ್ಧಿ ಸಂಘದ ವಾರ್ಷಿಕ ಸಭೆ ಹಾಗೂ ಶೈಕ್ಷಣಿಕ ಕಾರ್ಯಾಗಾರವನ್ನು ಶಾಖಾಧಿಕಾರಿ ಆರ್.ಬಿ. ಚವ್ಹಾಣ, ದ್ಯಾವನಗೌಡ ಗೌಡರ, ಡಾ. ಸುರೇಶ ಪರ್ವತಿಕರ, ಇತರ ಗಣ್ಯರು ಉದ್ಘಾಟಿಸಿದರು.
Published on

ಬಾದಾಮಿ: ಭಾರತೀಯ ಜೀವ ವಿಮಾ ನಿಗಮದ ಪ್ರತಿನಿಧಿಗಳು ಜೀವ ವಿಮೆಯನ್ನು ಹೆಚ್ಚಿನ ಮಟ್ಟದಲ್ಲಿ ಮಾಡಿಸುವ ಮೂಲಕ ನಮ್ಮ ಬಾದಾಮಿ ಶಾಖೆಯನ್ನು ಮೊದಲ ಸ್ಥಾನಕ್ಕೇರಿಸಬೇಕೆಂದು ಶಾಖಾಧಿಕಾರಿ ಆರ್.ಬಿ. ಚವ್ಹಾಣ ಸಲಹೆ ನೀಡಿದರು.

ಅಕ್ಕಮಹಾದೇವಿ ಕಲ್ಯಾಣ ಮಂಟಪದಲ್ಲಿ ಶನಿವಾರ ಜರುಗಿದ ಭಾರತೀಯ ಜೀವ ವಿಮಾ ನಿಗಮದ ಪ್ರತಿನಿಧಿಗಳ ಕ್ಷೇಮಾಭಿವದ್ಧಿ ಸಂಘದ ವಾರ್ಷಿಕ ಸಭೆ ಹಾಗೂ ಶೈಕ್ಷಣಿಕ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ವಿವಿಧ ವಿಮೆಗಳನ್ನು ಮಾಡಿಸುವ ಮೂಲಕ ಜನತೆ ನೆಮ್ಮದಿಯ ಜೀವನ ನಡೆಸಬೇಕೆಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಸಂಘದ ತಾಲೂಕಾಧ್ಯಕ್ಷ ದ್ಯಾಮನಗೌಡ ಗೌಡರ ಮಾತನಾಡಿ, ನಮ್ಮ ನಿಗಮದ ಪ್ರತಿನಿಧಿಗಳು ಕ್ಷೇಮಾಭಿವದ್ಧಿ ಸಂಘದ ವತಿಯಿಂದ ಹತ್ತು ಹಲವಾರು ಸಮಾಜಮುಖಿ ಕೆಲಸ ಕಾರ್ಯಗಳನ್ನು ಮಾಡುತ್ತಿದ್ದಾರೆ. ಪ್ರತಿ ವರ್ಷ ಎಸ್‌ಎಸ್‌ಎಲ್‌ಸಿ, ಪಿಯುಸಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸುತ್ತಿರುವ ಕಾರ್ಯ ಶ್ಲಾಘನೀಯ ಎಂದರು.

ಉಪನ್ಯಾಸಕರಾಗಿ ಆಗಮಿಸಿದ್ದ ಡಾ. ಸುರೇಶ ಪರ್ವತೀಕರ ಮಾತನಾಡಿ, ನಮ್ಮ ನಿಗಮದ ಪ್ರತಿನಿಧಿಗಳು ಜನರೊಂದಿಗೆ ಉತ್ತಮ ಒಡನಾಟವನ್ನು ಇಟ್ಟುಕೊಂಡು ಅವರಿಂದ ಹೆಚ್ಚಿನ ವಿಮೆ ಮಾಡಿಸಿ ನಿಗಮದ ಬೆಳವಣಿಗೆಗೆ ಸಹಕಾರ ನೀಡಬೇಕೆಂದು ಹೇಳಿದರು.

ವೇದಿಕೆಯಲ್ಲಿ ಉಪ ಶಾಖಾಧಿಕಾರಿ ಜೆ.ಸಿ. ಜಾಧವ, ವಿಭಾಗೀಯ ಕಾರ್ಯದರ್ಶಿ ಎಂ.ಎಂ. ರೇಶ್ಮಿ, ಜಿ.ವೈ. ಸತರಡ್ಡಿ, ಎನ್.ಜಿ. ಹಿರೇಮಠ, ಎನ್.ಟಿ.ಅಬಕಾರಿ, ಜಗದೀಶ ಮಲ್ಲಾಪೂರ, ವಿಠ್ಠಲ ಪ್ರಜಾರ ಉಪಸ್ಥಿತರಿದ್ದರು. ಪ್ರತಿನಿಧಿ ಶಿವಲಿಂಗಪ್ಪ ಡಿ. ಯಲಿಗಾರ ಸ್ವಾಗತಿಸಿ, ನಿರೂಪಿಸಿದರು. ಹೊನ್ನಯ್ಯ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್.ಜಿ. ಗೌಡರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net