ಇಂಡಿ ಜಿಲ್ಲಾ ಕೇಂದ್ರವಾಗಿಸಿ

Make Indi the district headquarters
ಇಂಡಿ ಜಿಲ್ಲಾ ಕೇಂದ್ರಕ್ಕೆ ಆಗ್ರಹಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ ಎಸಿ ಅಬೀದ್ ಗದ್ಯಾಳ ಅವರಿಗೆ ಮನವಿ ಸಲ್ಲಿಸಿದರು. ಎ.ಸಿ. ಪಾಟೀಲ, ಅನಂತ ಜೈನ, ಎಸ್.ಜಿ. ಕಾಮಗೊಂಡ, ಕಾವೇರಿ ಕಾಮಗೊಂಡ, ಐಶ್ಚರ್ಯ ಹಿಳ್ಳಿ ಇತರರಿದ್ದರು.
Published on

ಇಂಡಿ: ಇಂಡಿಯನ್ನು ಪ್ರತ್ಯೇಕ ಜಿಲ್ಲೆ ಘೋಷಣೆಗೆ ಆಗ್ರಹಿಸಿ ಪಟ್ಟಣದ ಸಿ.ವಿ. ರಾಮನ್ ಪದವಿ ಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿಗಳು, ತೇಜಸ್ ಸಾಮಾಜಿಕ ಸಾಮಾಜಿಕ ಸಂಘ, ಸಮಗ್ರ ಇಂಡಿ ಕ್ಷೇಮಾಭಿವೃದ್ಧಿ ಸಂಘ, ಜಿಲ್ಲಾ ಹೋರಾಟ ಸಮಿತಿ ಮತ್ತು ಆರ್ಟಿಕಲ್ 371ಜೆ ಹಕ್ಕು ಒತ್ತಾಯ ಸಮಿತಿ ವತಿಯಿಂದ ಮಿನಿ ವಿಧಾನಸೌಧ ಎದುರು ಶುಕ್ರವಾರ ಪ್ರತಿಭಟನೆ ನಡೆಸಿ ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ ಅವರಿಗೆ ಮನವಿ ಸಲ್ಲಿಸಿದರು.

ಕಾವೇರಿ ಕಾಮಗೊಂಡ ಮಾತನಾಡಿ, ಜಿಲ್ಲಾ ಕೇಂದ್ರಕ್ಕೆ ಯೋಗ್ಯವಾದ ಭೌಗೋಳಿಕ ಪ್ರದೇಶ ಮತ್ತು ಸರ್ಕಾರಿ ಕಚೇರಿಗಳನ್ನು ಹೊಂದಿರುವ ಇಂಡಿಯನ್ನು ಜಿಲ್ಲೆಯಾಗಿಸಬೇಕು. ಇದಕ್ಕಾಗಿ ಪಟ್ಟಣದ ಮತ್ತು ತಾಲೂಕಿನ ಎಲ್ಲ ಕಾಲೇಜಿನ ವಿದ್ಯಾರ್ಥಿಗಳು ಒಕ್ಕಟ್ಟಿನಿಂದ ಹೋರಾಟ ಮಾಡುವುದಕ್ಕೂ ಸಿದ್ಧರಿದ್ದೇವೆ ಎಂದರು.

ಇದನ್ನೂ ಓದಿ: ಪ್ಯಾನ್​ ಇಂಡಿಯಾ ಸಿನಿಮಾಗಳಿಗೆ ನಟ ದರ್ಶನ್​ ಕೊಟ್ಟ ಕೌಂಟರ್​ ಇದು! ಇಲ್ಲಿದೆ ನೋಡಿ ವಿಡಿಯೋ

ಐಶ್ವರ್ಯ ಹಿಳ್ಳಿ ಮಾತನಾಡಿ, ಸರ್ಕಾರ ನಮ್ಮ ಮನವಿ ಪರಿಗಣಿಸಿ ಇಂಡಿ ಜಿಲ್ಲಾ ಕೇಂದ್ರ ಘೋಷಿಸಬೇಕು .ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಪವಾಸ ಸತ್ಯಾಗ್ರಹ ಸೇರಿದಂತೆ ಉಗ್ರ ಹೋರಾಟ ಮಾಡಲಾಗುವುದು ಎಂದರು.

ಸಮಗ್ರ ಇಂಡಿ ಕ್ಷೇಮಾಭಿವೃದ್ಧಿ ಸಂಘದ ಎ.ಸಿ. ಪಾಟೀಲ ಮಾತನಾಡಿ, ಸದ್ಯ ಸರ್ಕಾರದ ಆಡಳಿತ ಯಂತ್ರವೇ ಬೆಳಗಾವಿಯಲ್ಲಿದ್ದು, ಅಭಿವೃದ್ಧಿ ದೃಷ್ಟಿಯಿಂದ ಇಂಡಿಗೆ ಪ್ರತ್ಯೇಕ ಜಿಲ್ಲೆಯ ಸ್ಥಾನಮಾನ ನೀಡಬೇಕು ಎಂದರು.

ಪ್ರತಿಭಟನೆಯಲ್ಲಿ ವೀರ ಭಾರತಿ ವಿದ್ಯಾ ಸಂಸ್ಥೆಯ ಅಧ್ಯಕ್ಷ ಅನಂತ ಜೈನ, ಎಸ್.ಜಿ. ಕಾಮಗೊಂಡ, ಸನ್ಮಥ ಹಳ್ಳಿ, ರಾಧಿಕಾ ಗಂಗಣ್ಣನವರ, ಮಂಜುನಾಥ ಬಾಬಳಗಾಂವ, ಹೋರಾಟ ಸಮಿತಿಯ ಮಂಜುನಾಥ ಕಾಮಗೊಂಡ, ಸಂತೋಷ ಪಾಪಣ್ಣನವರ, ಎ.ಎಸ್. ಗಾಣಿಗೇರ ಮತ್ತಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net