ಮಾನವ ಜನ್ಮ ಸಾರ್ಥಕಪಡಿಸಿಕೊಳ್ಳಿ

Make human birth worthwhile
ವಿಜಯಪುರದ ಮುರಣಕೇರಿಯಲ್ಲಿ ಹಮ್ಮಿಕೊಂಡಿದ್ದ ಶ್ರೀ ಸದ್ಗುರು ಸಮರ್ಥ ರಂಗರಾವ್​ ಮಹಾರಾಜರ 50ನೇ ವರ್ಷದ ಪುಣ್ಯತಿಥಿ ಸಪ್ತಾಹದ ಸುವರ್ಣ ಮಹೋತ್ಸವದ ಕಾರ್ಯಕ್ರಮದಲ್ಲಿ ಕೀರ್ತನಕಾರ ಶಂಕರಣ್ಣ ಅನಂತಪುರ ಆಶೀರ್ವಚನ ನೀಡಿದರು.
Published on

ವಿಜಯಪುರ: ಮಾನವ ಜನ್ಮ ದೊಡ್ಡದು ಸಿಕ್ಕಿರುವುದು. ಮನುಷ್ಯ ಜನ್ಮ ಸಿಕ್ಕಾಗಲೇ ನಾನ್ಯಾರೆಂದು ತಿಳಿದು ಜನ್ಮ ಸಾರ್ಥಕ ಮಾಡಿಕೊಳ್ಳಬೇಕು ಎಂದು ಸಂಗಮೇಶ್ವರ ಮಹಾರಾಜರು ಹೇಳಿದರು.

ನಗರದ ಮುರಣಕೇರಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಶ್ರೀ ಸದ್ಗುರು ಸಮರ್ಥ ರಂಗರಾವ್​ ಮಹಾರಾಜರ 50ನೇ ವರ್ಷದ ಪುಣ್ಯತಿಥಿ ಸಪ್ತಾಹದ ಸುವರ್ಣ ಮಹೋತ್ಸವದ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿ ಮಾತನಾಡಿದರು.

ಕೀರ್ತನಕಾರ ಶಂಕರಣ್ಣ ಅನಂತಪುರ ಮಾತನಾಡಿ, ಸತ್ಕುಲ ಜನ್ಮ, ಸಾದ್ವಿ ಸತಿ, ಸತ್ಪಾತ್ರ ಮಗ, ಸುಭಾಷಿತ ಸಂಗ್ರಹ. ಇವು ಪ್ರಕೃತಿ ಪುಣ್ಯದಿಂದ ಮಾತ್ರ ಲಭಿಸುತ್ತವೆ. ಶ್ರೀ ಸದ್ಗುರು ಸಮರ್ಥ ರಂಗರಾವ ಮಹಾರಾಜರು ಅಂತ 23ನೇ ತಲೆಮಾರಿನವರು ಅವರ ಪೂರ್ವಜರೆಲ್ಲ ರಾಮೋಪಾಸಕರು ಹಾಗೂ ಸೂಯೊರ್ಪಾಸಕರು ಎಂಬುದಾಗಿ ಹೇಳಿದರು.

ಸಪ್ತಾಹದ ಸುವರ್ಣ ಮಹೋತ್ಸವದ ಎರಡನೇ ದಿನ ಬೆಳಗ್ಗೆ ಶ್ರೀ ಸದ್ಗುರು ಸಮರ್ಥ ರಂಗರಾವ್​ ಮಹಾರಾಜರ ಹಾಗೂ ರಾಜ ರಾಮಚಂದ್ರ ರಾವ್​ ಮಹಾರಾಜರ ಮೂರ್ತಿಗಳಿಗೆ ಕಾಕಡ ಆರತಿ ಹಾಗೂ ರುದ್ರಾಭಿಷೇಕ ಪೂಜೆ ನಡೆದವು.

ವಾರ್ಕರಿ ಸಂಪ್ರದಾಯದ ರವಿ ಕುಲಕರ್ಣಿ ಕೀರ್ತನೆ ಹೇಳಿದರು. ಸಂಜೆ ಬಾಗಲಕೋಟೆಯ ಸಂತ ಶ್ರೇಷ್ಠ ಪ್ರಸನ್ನ ಶಂಕರ್​ ಭೂಖರೆ ಅವರಿಂದ ಪ್ರವಚನ ನಡೆಯಿತು. ನಂತರ ಭಕ್ತಾದಿಗಳಿಗೆ ಮಹಾಪ್ರಸಾದ ವಿತರಿಸಲಾಯಿತು. ರಾತ್ರಿ ನಡೆದ ಜಾಗರಣೆಯಲ್ಲಿ ಪುಟ್ಟರಾಜ ಮಹಾರಾಜರಿಂದ ಕೀರ್ತನೆ ನಂತರ ಭಜನೆ ನಡೆಯಿತು.

ಈರಣ್ಣ ಪತ್ತಾರ, ಕಾಳಪ್ಪ ಮನ್ವಾಚಾರಿ, ಮಹೇಶ ಮನ್ವಾಚಾರಿ, ಆನಂದ ಪತ್ತಾರ, ಅಶೋಕ ಪತ್ತಾರ, ಪ್ರಮೋದ ಬಡಿಗೇರ, ರಮಾನಂದ ಮನ್ವಾಚಾರಿ, ಸಂತೋಷ ವಿಶ್ವಕರ್ಮ, ಭೀಮಶಿ ಅಟಪಟಕರ, ಶಿವು ಪತ್ತಾರ ನಾಗಠಾಣ, ಅಮರ ಪತ್ತಾರ, ರೋಹಿತ ಮನ್ವಾಚಾರಿ, ಪಾಂಡು ಟಂಕಸಾಲಿ, ಗಣೇಶ ಪತ್ತಾರ, ವಿನಾಯಕ ಪತ್ತಾರ (ಸಾಂಗಲಿ), ಸಂದೀಪ ಪತ್ತಾರ, ಪರಮಾನಂದ ಬಡಿಗೇರ (ಉಕ್ಕಲಿ), ಕುಮಾರ ಪತ್ತಾರ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net