ಇ-ಪೌತಿ ಖಾತೆ ಸದ್ಬಳಕೆ ಮಾಡಿಕೊಳ್ಳಿ

04 10 2025_BGR_RURAL-PAGE_04
ದೇವನಹಳ್ಳಿ ತಾಲೂಕು ನಲ್ಲೂರು ಗ್ರಾಮ ಲೆಕ್ಕಾಧಿಕಾರಿಗಳ ಕಚೇರಿ ಆವರಣದಲ್ಲಿ ಹಮ್ಮಿಕೊಂಡಿದ್ದ ಇ ಪೌತಿ ಖಾತೆ ಆಂದೋಲನದಲ್ಲಿ ಗ್ರಾಮ ಪಂಚಾಯಿತಿ ಅಧ್ಯೆ ಮಂಜುಳಾ ರಾಮಾಂಜಿನಪ್ಪ ಕರಪತ್ರ ಬಿಡುಗಡೆಗೊಳಿಸಿದರು. ಗ್ರಾಮ ಆಡಳಿತ ಅಧಿಕಾರಿ ಗೌತಮ್​, ಗ್ರಾಪಂ ಮಾಜಿ ಅಧ್ಯಕ್ಷರಾದ ಗಂಗಾಧಮೂರ್ತಿ, ನಾಗವೇಣಿ ಮುನಿರಾಜ್​ ಇತರರು ಇದ್ದರು.
Published on

ಚನ್ನರಾಯಪಟ್ಟಣ: ಇ&ಪೌತಿ ಖಾತೆ ಆಂದೋಲನ ರೈತರ ಸದ್ಬಳಕೆ ಮಾಡಿಕೊಳ್ಳುವುದಕ್ಕೆ ದಾಖಲಾತಿಗಳನ್ನು ಒದಗಿಸಬೇಕು ಎಂದು ನಲ್ಲೂರು ಗ್ರಾಮ ಆಡಳಿತ ಅಧಿಕಾರಿ ಗೌತಮ್​ ಹೇಳಿದರು. ದೇವನಹಳ್ಳಿ ತಾಲೂಕು ಚನ್ನ ರಾಯಪಟ್ಟಣ ಹೋಬಳಿಯ ನಲ್ಲೂರು ಗ್ರಾಮ ಲೆಕ್ಕಾಧಿಕಾರಿಗಳ ಕಚೇರಿಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಇ&ಪೌತಿ ಖಾತೆ ಆಂದೋಲನದಲ್ಲಿ ಮಾತನಾಡಿ, ಸಾರ್ವಜನಿಕರು ಅರ್ಜಿ ವಂಶವೃಕ್ಷ ಮೃತ ಖಾತೆದಾರರ ಮರಣ ಪ್ರಮಾಣ ಪತ್ರ, ಎಲ್ಲ ವಾರಸುದಾರರ ಆಧಾರ್​ ಕಾರ್ಡ್​, ಪಹಣಿ ದಾಖಲೆಗಳನ್ನು ಸಲ್ಲಿಸಿ ಪೌತಿ ಖಾತೆ ಮಾಡಿಸಿಕೊಂಡರೆ ಕೇಂದ್ರ ಸರ್ಕಾರದ ಕಿಸಾನ್​ ಸಮ್ಮಾನ್​ ಯೋಜನೆ, ಸಹಕಾರಿ ಸಂಗಳಲ್ಲಿ ಬೆಳೆ ಸಾಲ ಪಡೆದುಕೊಳ್ಳಬಹುದು ಎಂದರು.

ಗ್ರಾಮ ಪಂಚಾಯಿತಿ ಅಧ್ಯೆ ಮಂಜುಳಾ ರಾಮಾಂಜಿನಪ್ಪ ಮಾತನಾಡಿ, ಸರ್ಕಾರದ ಆದೇಶದಂತೆ ಇ&ಪೌತಿ ಖಾತೆ ಆಂದೋಲನ ಮಾಡುತ್ತಿ ರುವುದರಿಂದ ಬಡ ರೈತರು ತಾಲೂಕು ಕಚೇರಿಗೆ ಅಲೆಯುವ ಬಾಧೆ ತಪ್ಪುತ್ತದೆ. ಸರಿಯಾದ ದಾಖಲೆ ಕೊಟ್ಟು ನಿಮ್ಮ ಹೆಸರಿಗೆ ಖಾತೆ ಮಾಡಿಸಿಕೊಂಡರೆ ಸೌಲಭ್ಯ ಪಡೆದುಕೊಳ್ಳುವುದಕ್ಕೆ ಸಹಕಾರಿಯಾಗುತ್ತದೆ ಎಂದರು. ಗ್ರಾಪಂ ಮಾಜಿ ಉಪಾಧ್ಯೆ ಮಹಾದೇವಿ ವೀರಭದ್ರಪ್ಪ, ಸದಸ್ಯರಾದ ಲಾಲಿತೇಶ್​, ನರಸಿಂಹಮೂರ್ತಿ, ಕರ ವಸೂಲಿಗಾರರಾಮಯ್ಯ, ಗ್ರಾಮ ಸೇವಕ ಸಂತೋಷ್​ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net