ತರಬೇತಿ ಶಿಬಿರಗಳು ಸದುಪಯೋಗವಾಗಲಿ

22.npk ..4
ಈಜು ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಪಾಲಕರು, ಶಿಬಿರಾರ್ಥಿಗಳು ಪಾಲ್ಗೊಂಡಿದ್ದರು.
Published on

ನಾಪೋಕ್ಲು: ತರಬೇತಿ ಶಿಬಿರಗಳಲ್ಲಿ ಪಾಲ್ಗೊಳ್ಳುವುದರಿಂದ ಶಿಬಿರಾರ್ಥಿಗಳು ಮಾನಸಿಕ ಹಾಗೂ ದೈಹಿಕವಾಗಿ ಸದೃಢರಾಗಬಹುದು ಎಂದು ನಿವೃತ್ತ ಶಿಕ್ಷಕಿ ಮಂಜಂಡ್ರ ರೇಖಾ ಉಲ್ಲಾಸ ಹೇಳಿದರು.

ಸಮೀಪದ ಕಕ್ಕಬ್ಬೆಯ ನಾಲಡಿ ಗ್ರಾಮದ ರಿವರ್ ಸ್ವಿಮ್ಮಿಂಗ್ ಕ್ಲಬ್ ವತಿಯಿಂದ ನಾಲಡಿ ಅಂಬಲ ಹೊಳೆಯಲ್ಲಿ ಆಯೋಜಿಸಿದ್ದ ಈಜು ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಮಕ್ಕಳ ಶ್ರೇಯೋಭಿವೃದ್ಧಿಗೆ ಪಾಲಕರ ಸಹಕಾರ ಮುಖ್ಯವಾಗಿದ್ದು, ಇಂತಹ ತರಬೇತಿ ಶಿಬಿರಗಳ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳುವಂತಾಗಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಿವರ್ ಸ್ವಿಮ್ಮಿಂಗ್ ಕ್ಲಬ್ ಅಧ್ಯಕ್ಷ ಬೊಲಿಯಾಡಿರ ಸಂತು ಸಂತ್ರಮಣಿ ಮಾತನಾಡಿ, ಈ ಭಾಗದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ವಿಶಿಷ್ಟವಾದ ಈಜು ತರಬೇತಿ ಶಿಬಿರವನ್ನು ನುರಿತ ತರಬೇತಿದಾರರಿಂದ ಆಯೋಜಿಸಲಾಗುತ್ತಿದ್ದು, ಕಳೆದ ನಾಲ್ಕು ವರ್ಷಗಳಿಂದ ಶಿಬಿರಕ್ಕೆ ಉತ್ತಮ ಪ್ರೋತ್ಸಾಹ ದೊರೆಯುತ್ತಿದೆ. ಈ ವರ್ಷ 45 ವಿದ್ಯಾರ್ಥಿಗಳು ಈಜು ತರಬೇತಿ ಶಿಬಿರದಲ್ಲಿ ಭಾಗವಹಿಸಿದ್ದು, ಇದಕ್ಕೆ ಪಾಲಕರ ಸಹಕಾರ ಮುಖ್ಯವಾಗಿದೆ. ತಜ್ಞ ತರಬೇತುದಾರರಾದ ಕಂಗಂಡ ಅಪ್ಪಚ್ಚ, ಕಾಂಡಟಡ ಸಜನ್, ಕಂಬೆಯಂಡ ತರುಣ್, ಬಾಚಮಂಡ ದೇವಯ್ಯ, ಕರೋಟಿರ ಪುವಣ್ಣ ಸೂಕ್ತ ಮಾರ್ಗದರ್ಶನ ಹಾಗೂ ನುರಿತ ತರಬೇತಿ ನೀಡಿದ್ದಾರೆ. ಶಿಬಿರಾರ್ಥಿಗಳು ಹೆಚ್ಚಿನ ತರಬೇತಿ ಪಡೆದು ಜಿಲ್ಲಾ, ರಾಜ್ಯ ಮಟ್ಟದಲ್ಲಿ ಪಾಲ್ಗೊಂಡು ಗೌರವಕ್ಕೆ ಪಾತರಾಗಿದ್ದಾರೆ ಎಂದರು.

ಮಾಳೆಯಂಡ ಅಪ್ಪಣ್ಣ, ಅಪ್ಪಾರಂಡ ಸೀನುನಂಜಪ್ಪ, ಅಯ್ಯನೆರವಂಡ ಅಪ್ಪಣ್ಣ, ಚೇನಂಡ ಬೋಪಣ್ಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net