ಯೋಜನೆಗಳನ್ನು ಸದ್ಭಳಕೆ ಮಾಡಿಕೊಳ್ಳಿ

ಸಂಡೂರಿನಲ್ಲಿ ಲಾನುಭಗಳಿಗೆ ತ್ರಿಚಕ್ರ ಸೈಕಲ್ ವಿತರಿಸಲಾಯಿತು. ಶಾಸಕಿ ಅನ್ನಪೂರ್ಣಾ ತುಕಾರಾಮ್, ಸಂಸದ ಈ.ತುಕಾರಾಮ್, ಪುರಸಭೆ ಅಧ್ಯಕ್ಷ ಸಿರಾಜ್ ಹುಸೇನ್, ಉಪಾಧ್ಯಕ್ಷೆ ಎಂ.ಸಿ.ಲತಾ, ಪ್ರಾಕೃಪಸಸಂ ಅಧ್ಯಕ್ಷ ಗಾಣಿಗರ ವೀರೇಶ, ಉಪಾಧ್ಯಕ್ಷ ಎರ‌್ರಿಸ್ವಾಮಿ, ಮಾಜಿ ಅಧ್ಯಕ್ಷ ಕುರುಬರ ಸತ್ಯಪ್ಪ ಇತರರಿದ್ದರು.
ಸಂಡೂರಿನಲ್ಲಿ ಲಾನುಭಗಳಿಗೆ ತ್ರಿಚಕ್ರ ಸೈಕಲ್ ವಿತರಿಸಲಾಯಿತು. ಶಾಸಕಿ ಅನ್ನಪೂರ್ಣಾ ತುಕಾರಾಮ್, ಸಂಸದ ಈ.ತುಕಾರಾಮ್, ಪುರಸಭೆ ಅಧ್ಯಕ್ಷ ಸಿರಾಜ್ ಹುಸೇನ್, ಉಪಾಧ್ಯಕ್ಷೆ ಎಂ.ಸಿ.ಲತಾ, ಪ್ರಾಕೃಪಸಸಂ ಅಧ್ಯಕ್ಷ ಗಾಣಿಗರ ವೀರೇಶ, ಉಪಾಧ್ಯಕ್ಷ ಎರ‌್ರಿಸ್ವಾಮಿ, ಮಾಜಿ ಅಧ್ಯಕ್ಷ ಕುರುಬರ ಸತ್ಯಪ್ಪ ಇತರರಿದ್ದರು.
Published on

ಸಂಡೂರು: ಸರ್ಕಾರದ ವಿವಿಧ ಯೋಜನೆಗಳಡಿ ಫಲಾನುಭವಿಗಳಿಗೆ ಸೌಲಭ್ಯ ಕಲ್ಪಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಡಿಡಿ ರಾಮಕೃಷ್ಣ ನಾಯಕ ಹೇಳಿದರು.

ತಾಲೂಕಿನ ಕೃಷ್ಣನಗರದ ಶಾಸಕರ ಸಂಪರ್ಕ ಕಚೇರಿ ಬಳಿ ಶುಕ್ರವಾರ ಹಮ್ಮಿಕೊಂಡಿದ್ದ ಪರಿಕರಗಳ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಅಂಬೇಡ್ಕರ್ ಅಭಿವೃದ್ಧಿ ನಿಗಮ ಹಾಗೂ ಸಣ್ಣ ನೀರಾವರಿ ಇಲಾಖೆಯಿಂದ ಎಸ್ಸಿ-ಎಸ್ಟಿಯ 66 ಫಲಾನುಭವಿಗಳಿಗೆ 2.81ಕೋಟಿ ರೂ. ವೆಚ್ಚದಲ್ಲಿ ಪಂಪ್ ಸೆಟ್, ವಿಕಲಚೇತನ ಇಲಾಖೆ ಅಡಿಟ್ ಯೋಜನೆಯಡಿ 74 ಅಂಗವಿಕಲರಿಗೆ 12 ತ್ರಿಚಕ್ರ ಸೈಕಲ್, ಮೊಬೈಲ್, ಶ್ರವಣ ಸಾಧನ, ಅರಣ್ಯ ಇಲಾಖೆಯಡಿ ಎಂಎಸ್‌ಪಿಎಲ್ ಸಿಎಸ್‌ಆರ್‌ನಡಿ 20 ಫಲಾನುಭವಿಗಳಿಗೆ ಗ್ಯಾಸ್ ಸಿಲಿಂಡರ್, ಮೀನುಗಾರಿಕೆ ಇಲಾಖೆಯಡಿ 35 ಫಲಾನುಭವಿಗಳಿಗೆ ಬಲೆ, ಕಂದಾಯ ಇಲಾಖೆಯಡಿ ವಿಎಗಳಿಗೆ 20 ಲ್ಯಾಪ್‌ಟಾಪ್‌ಗಳನ್ನು ವಿತರಿಸಲಾಗಿದೆ ಎಂದರು.

ಸಂಸದ ಈ.ತುಕಾರಾಮ್ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳನ್ನು ಸದ್ಭಳಕೆ ಮಾಡಿಕೊಳ್ಳಬೇಕು. ದೇವಸ್ಥಾನ ಕಟ್ಟುತ್ತೇವೆ ಎನ್ನುವುದನ್ನು ಬಿಟ್ಟು ಅತ್ಯಾಧುನಿಕ ಲೈಬ್ರರಿ, ಶಾಲಾ, ಕಾಲೇಜಿಗೆ ಬೇಕಾಗುವ ಸಹಾಯ ಪಡೆಯಿರಿ. ಸಂಡೂರು ಪೋಸ್ಟ್ ಆಫೀಸ್ ಪಕ್ಕದಲ್ಲಿ 1.60 ಲಕ್ಷ ರೂ. ವೆಚ್ಚದ ಗ್ರಂಥಾಲಯ ನಿರ್ಮಿಸಲಾಗುವುದು. ಅಂತಾಪುರ ಗ್ರಾಮಕ್ಕೆ ಎಸ್‌ಬಿಐ ಬ್ರ್ಯಾಂಚ್, ಬಿಎಸ್‌ಎನ್‌ಎಲ್‌ಗೆ 14 ಲಕ್ಷ ರೂ. ಮೊತ್ತದ ಕಾಮಗಾರಿ, ಚೋರನೂರು ಮತ್ತು ಕುಡಿತಿನಿ ಗ್ರಾಮಗಳಿಗೆ 30 ಬೆಡ್‌ಗಳ ಆಸ್ಪತ್ರೆ ಮಂಜೂರಾಗಿವೆ ಎಂದರು.

ತಹಸೀಲ್ದಾರ್ ಅನಿಲ್ ಕುಮಾರ್, ತಾಪಂ ಉದ್ಯೋಗ ಖಾತ್ರಿ ಎ.ಡಿ.ರೇಣುಕಾಚಾರ್ಯಸ್ವಾಮಿ, ಆರ್‌ಎಫ್‌ಒ ಗಳಾದ ಸೈಯದ್ ದಾದಾ ಖಲಂದರ್, ಮಂಜುನಾಥ, ಸಣ್ಣ ನೀರಾವರಿ ಇಲಾಖೆ ಎಇಇ ಸೂಗಪ್ಪ, ಜಿಲ್ಲಾ ಗ್ರಾಮೀಣ ಕಾಂಗ್ರೆಸ್‌ನ ಅಧ್ಯಕ್ಷೆ ಆಶಾಲತಾ ಸೋಮಪ್ಪ, ಶೈಲಜಾ ನಿಕ್ಕಂ, ಸಾಧನಾ ಬೋಯಿಟೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net