ಗ್ರಂಥಾಲಯ ಸದ್ಬಳಕೆ ಮಾಡಿಕೊಳ್ಳಿ

ವದಗನಾಳ ಗ್ರಾಮದಲ್ಲಿ ಗ್ರಂಥಾಲಯ ಹಾಗೂ ಅರಿವು ಕೇಂದ್ರವನ್ನು ಗ್ರಾಪಂ ಸದಸ್ಯೆ ಗಂಗವ್ವ ಬಂಗ್ಲಿ ಉದ್ಘಾಟಿಸಿದರು. ಅಧ್ಯಕ್ಷ ಯಲ್ಲಪ್ಪ ಓಜನಹಳ್ಳಿ, ಉಪಾಧ್ಯಕ್ಷೆ ವಿರುಪಮ್ಮ ಬೇವೂರು, ಪಿಡಿಒ ಅಶೋಕ ರಾಂಪುರ, ಸದಸ್ಯರಾದ ಆರ್.ಜಿ.ತಿಮ್ಮನಗೌಡ, ಪ್ರಕಾಶ ಚನ್ನನಗೌಡ್ರು ಇತರರಿದ್ದರು.

Published on

ಅಳವಂಡಿ: ಗ್ರಾಮದಲ್ಲಿ ಗ್ರಂಥಾಲಯ ಆರಂಭಿಸಿ ಸಾರ್ವಜನಿಕರಿಗೆ ಓದುವ ಅವಕಾಶ ನೀಡಿದ್ದು ಸಂತಸ ತಂದಿದೆ ಎಂದು ಗ್ರಾಪಂ ಸದಸ್ಯೆ ಗಂಗವ್ವ ಬಂಗ್ಲಿ ಹೇಳಿದರು.

ಸಮೀಪದ ವದಗನಾಳ ಗ್ರಾಮದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಹಲಗೇರಿ ಗ್ರಾಪಂನಿಂದ ನಿರ್ಮಿಸಿದ ಗ್ರಂಥಾಲಯ ಹಾಗೂ ಅರಿವು ಕೇಂದ್ರ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಗ್ರಾಮದಲ್ಲಿ ಇವರೆಗೂ ಗ್ರಂಥಾಲಯ ಇಲ್ಲದಿರುವುದರಿಂದ ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಓದುವ ಹವ್ಯಾಸ ಕಡಿಮೆಯಾಗಿತ್ತು. ಈಗ ಗ್ರಂಥಾಲಯ ಆರಂಭವಾಗಿದ್ದು ಓದುಗರು ಸದ್ಬಳಕೆ ಮಾಡಿಕೊಳ್ಳಿ ಎಂದರು.

ಗ್ರಾಪಂ ಅಧ್ಯಕ್ಷ ಯಲ್ಲಪ್ಪ ಓಜನಹಳ್ಳಿ, ಉಪಾಧ್ಯಕ್ಷೆ ವಿರುಪಮ್ಮ ಬೇವೂರು, ಪಿಡಿಒ ಅಶೋಕ ರಾಂಪುರ, ಸದಸ್ಯರಾದ ಆರ್.ಜಿ.ತಿಮ್ಮನಗೌಡ, ಪ್ರಕಾಶ ಚನ್ನನಗೌಡ್ರು, ಸಿದ್ದಮ್ಮ ಕೋರಿ, ಅಕ್ಕಮ್ಮ ಡಿ.ಉಪ್ಪಾರ, ಎಸ್‌ಡಿಎಂಸಿ ಅಧ್ಯಕ್ಷ ಗವಿಸಿದ್ದಪ್ಪ ಬೆದವಟ್ಟಿ, ಸದಸ್ಯ ಹುಚ್ಚಪ್ಪ ಶ್ಯಾನುಬೋಗರ, ಗ್ರಂಥಾಲಯ ಮೇಲ್ವಿಚಾರಕಿ ಅನ್ನಪೂರ್ಣಾ ಸಂಜೀವಗೌಡ್ರು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net