

ಕಂಪ್ಲಿ: ತುರ್ತು ಪ್ರತಿಕ್ರಿಯೆ ಬೆಂಬಲ ವ್ಯವಸ್ಥೆಯು ಸರ್ಕಾರದ ದೂರದೃಷ್ಟಿ ಯೋಜನೆಯಾಗಿದ್ದು, ನಾಗರಿಕರು ತುರ್ತು ಪರಿಸ್ಥಿತಿಗಳನ್ನು ಪರಿಹರಿಸಲು 112 ಇಂಡಿಯಾ ಮೊಬೈಲ್ ಆಪ್ಲಿಕೇಷನ್ ವ್ಯವಸ್ಥೆ ಜಾರಿಗೊಳಿಸಿದೆ ಎಂದು ಇಆರ್‌ಎಸ್‌ಎಸ್ ರೆಸ್ಪಾಂಡರ್ ಈರಪ್ಪ ದುದುಮಿ ಹೇಳಿದರು. ನಗರದ ತಹಸಿಲ್ ಕಚೇರಿ ಆವರಣದಲ್ಲಿ ಶುಕ್ರವಾರ ಇಆರ್‌ಎಸ್‌ಎಸ್ 112(ತುರ್ತ ಪ್ರತಿಕ್ರಿಯೆ ಬೆಂಬಲ ವ್ಯವಸ್ಥೆ) ಕುರಿತು ಮಾತನಾಡಿದರು. ನಾಗರಿಕರು ಯಾವುದೇ ತುರ್ತು ಪರಿಸ್ಥಿತಿಯಲ್ಲಿ 112ಕ್ಕೆ ಉಚಿತ ಕರೆ ಮಾಡಿ ದೂರು ಸಲ್ಲಿಸಬಹುದು. ಪರಿಹರಿಸಲು ತಕ್ಷಣ ಪ್ರತಿಕ್ರಿಯಿಸಲಾಗುವುದು. ಎಲ್ಲರೂ ಈ ಯೋಜನೆಯನ್ನು ಸದ್ಬಳಕೆ ಮಾಡಿಕೊಳ್ಳಿ ಎಂದರು.