ಯೋಜನೆಗಳ ಸದ್ಬಳಕೆ ಮಾಡಿಕೊಳ್ಳಲಿ

1
ಮೇಖಳಿ ಗ್ರಾಮದ ದಾಸರಕೋಡಿಯಲ್ಲಿ 5 ಲಕ್ಷ ರೂ. ಅನುದಾನದಲ್ಲಿ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಶಾಸಕ ಡಿ.ಎಂ.ಐಹೊಳೆ ಚಾಲನೆ ನೀಡಿದರು. ರಾಜೇಶ ಡಂಗ, ಅಣ್ಣಾಸಾಹೇಬ ಖೆಮಲಾಪುರೆ, ಪಿ.ಎ.ನಾಯಿಕ, ಸಂಜು ಒಡೆಯರ, ಬಸು ನಾಯಿಕ, ಕೃಷ್ಣಾ ದತ್ತವಾಡೆ, ಮಾರುತಿ ನಾಯಿಕ, ವಿಠ್ಠಲ ಪೂಜಾರಿ, ರವಿ ಪಟೇಗಾರ, ಈರಪ್ಪ ನಾಯಿಕ, ಭರಮಾ ಪೂಜಾರಿ, ಶಿವನಾಯಕ ನಾಯಿಕ, ತಾಯವ್ವ ಅಕ್ಕೆನ್ನವರ, ಮಾಯವ್ವ ಅಕ್ಕೆನ್ವರ ಇತರರಿದ್ದರು.
Published on

ರಾಯಬಾಗ: ವಿದ್ಯಾರ್ಥಿಗಳಿಗೆ ಸರ್ಕಾರ ಅನೇಕ ಯೋಜನೆ ಜಾರಿಗೆ ತಂದಿದ್ದು, ಸದುಪಯೋಗ ಪಡೆಯಬೇಕು ಎಂದು ಶಾಸಕ ಡಿ.ಎಂ.ಐಹೊಳೆ ಹೇಳಿದರು.

ತಾಲೂಕಿನ ಮೇಖಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಗೆ ವಿವೇಕ ಯೋಜನೆಯಡಿ ನಿರ್ಮಿಸಿರುವ ಶಾಲಾ ಕೊಠಡಿ ಉದ್ಘಾಟಿಸಿ ಮಾತನಾಡಿ, ಶಿಕ್ಷಕರು ವಿದ್ಯಾರ್ಥಿಗಳಿಗೆ ಉತ್ತಮ ರೀತಿಯಲ್ಲಿ ಬೋಧನೆ ಮಾಡಬೇಕು. ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆಯುವ ಮೂಲಕ ತಾಲೂಕಿಗೆ ಕೀರ್ತಿ ತರಬೇಕೆಂದರು.

ಬಿಇಒ ಬಸವರಾಜಪ್ಪ ಆರ್., ಎಸ್‌ಡಿಎಂಸಿ ಉಪಾಧ್ಯಕ್ಷ ಸಂಜು ಒಡೆಯರ, ಪಿಡಿಒ ನೂರಅಹಮ್ಮದ್ ಕುಡಚಿ, ಮುಖ್ಯೋಪಾಧ್ಯಾಯ ಸಂತೋಷ ಬಸನಾಯ್ಕ, ಅಣ್ಣಾಸಾಹೇಬ ಖೆಮಲಾಪುರೆ, ಕೆ.ಎಂ.ಹಂಚಿನಮನಿ, ಪಿ.ಎ.ನಾಯಿಕ, ಬಸವರಾಜ ನಾಯಿಕ, ರವಿ ಪಟ್ಟೆಗಾರ, ಕೃಷ್ಣಾ ದತ್ತವಾಡೆ, ಈರಪ್ಪ ನಾಯಿಕ, ಸಿದ್ದು ಕಾಂಬಳೆ, ಮಾರುತಿ ನಾಯಿಕ, ಪಿ.ಎಸ್.ಶಾರಬಿದ್ರೆ, ಶ್ರೀಧರ ಖಿಚಡೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net