ಜನತಾ ನ್ಯಾಯಾಲಯ ಸದುಪಯೋಗಪಡಿಸಿಕೊಳ್ಳಿ

IMG-20230909-WA0435
Published on

ಆಲೂರು: ಜನತಾ ನ್ಯಾಯಾಲಯದಲ್ಲಿ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳುವುದರಿಂದ ಕುಟುಂಬದಲ್ಲಿ ಮತ್ತು ಸಮಾಜದಲ್ಲಿ ಶಾಂತಿ ಸೌಹಾರ್ದತೆ ನೆಲೆಸುತ್ತದೆ ಎಂದು ಜೆಎಂಎಫ್ ನ್ಯಾಯಾಧೀಶೆ ಎಂ.ಸಿ.ನಿರ್ಮಲಾ ತಿಳಿಸಿದರು.

ಪಟ್ಟಣದ ಬಿಕ್ಕೋಡು ರಸ್ತೆಯಲ್ಲಿರುವ ಜೆಎಂಎಫ್ ನ್ಯಾಯಾಲಯದಲ್ಲಿ ನಡೆದ ಜನತಾ ನ್ಯಾಯಾಲಯದಲ್ಲಿ ಮಾತನಾಡಿ, ನ್ಯಾಯಾಲಯದಲ್ಲಿ ಪ್ರಕರಣಗಳು ಮುನ್ನಡೆಯುತ್ತಿದ್ದರೆ ಕಕ್ಷಿದಾರರು ನ್ಯಾಯಾಲಯಕ್ಕೆ ಅಲೆದಾಡಿ ಸೋತು ಹೋಗುತ್ತಾರೆ. ಸಮಯ ಉಳಿತಾಯ ಮತ್ತು ಕುಟುಂಬದಲ್ಲಿ ಶಾಂತಿ ಸೌಹಾರ್ದತೆ ನೆಲೆಸುವ ಉದ್ದೇಶದಿಂದ ಉಚ್ಚ ನ್ಯಾಯಾಲಯವು ಜನತಾ ನ್ಯಾಯಾಲಯವನ್ನು ಪ್ರಾರಂಭಿಸಿದೆ. ಪ್ರತಿ ತಿಂಗಳು 2ನೇ ಶನಿವಾರ ನಡೆಯುವ ಜನತಾ ನ್ಯಾಯಾಲಯದಲ್ಲಿ ಹಲವು ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗುವುದು. ಇಲ್ಲಿ ನೀಡುವ ತೀರ್ಪು ಪ್ರಶ್ನಿಸಿ ಮೇಲ್ನನವಿ ಸಲ್ಲಿಸಲು ಅವಕಾಶವಿಲ್ಲದಿರುವುದರಿಂದ ಈ ತೀರ್ಪು ಅಂತಿಮವಾಗಿರುತ್ತದೆ. ಹೀಗಾಗಿ ಕಕ್ಷಿದಾರರು ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ನ್ಯಾಯಾಲಯದಲ್ಲಿ ಸಿವಿಲ್ 11, ಕ್ರಿಮಿನಲ್ 122, ಎಂಎಂಆರ್‌ಡಿ 1, ಎನ್‌ಐ 20, ಜೆಸಿ 68, ಐಪಿಸಿ 10, ಕುಡಿದು ವಾಹನ ಚಲಾವಣೆ 12 ಲಿಟಿಗೇಷನ್ 1 ಮತ್ತು ಒಎಸ್ 20 ಪ್ರಕರಣಗಳನ್ನು ಇತ್ಯರ್ಥಪಡಿಸಲಾಯಿತು. ಸಹಾಯಕ ಸರ್ಕಾರಿ ಅಭಿಯೋಜಕಿ ಜಯಶ್ರೀ, ಸಂಧಾನ ವಕೀಲರಾಗಿ ಟಿ.ಎಸ್.ಸಚಿನ್, ವಕೀಲರಾದ ಕೆ.ನಾಗರಾಜು, ಕೆ.ಜಿ.ನಾಗರಾಜು, ಎಚ್.ಡಿ.ಮಂಜೇಗೌಡ, ಎಂ.ಸಿ.ರಮ್ಯಾ ಭಾಗವಹಿಸಿದ್ದರು.

ಫೋಟೋ ಕ್ಯಾಫ್ಶನ್ಸ್ :
ಆಲೂರು ಜೆ.ಎಂ.ಎಫ್. ನ್ಯಾಯಾಲಯದಲ್ಲಿ ನಡೆದ ಜನತಾ ನ್ಯಾಯಾಲಯದಲ್ಲಿ ನ್ಯಾಯಾಧೀಶೆ ಎಂ.ಸಿ.ನಿರ್ಮಲಾ ಭಾಗವಹಿಸಿದ್ದರು. ಜಯಶ್ರೀ, ಟಿ.ಎಸ್.ಸಚಿನ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net