ಸರ್ಕಾರಿ ಯೋಜನೆ ಸದ್ಬಳಕೆಯಾಗಲಿ

ಅರಸೀಕೆರೆಯಲ್ಲಿ ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ  ಫಲಾನುಭವಿಗಳಿಗೆ ಕೊಳವೆ ಬಾವಿ ಸಲಕರಣೆ ವಿತರಿಸಲಾಯಿತು. ಶಿವಲಿಂಗೇಗೌಡ, ರುದ್ರೇಶ್, ದೇವರಾಜ್, ಸಿದ್ದಪ್ಪ, ಶೇಖರ ನಾಯ್ಕ್ ಇದ್ದರು.
ಅರಸೀಕೆರೆಯಲ್ಲಿ ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಫಲಾನುಭವಿಗಳಿಗೆ ಕೊಳವೆ ಬಾವಿ ಸಲಕರಣೆ ವಿತರಿಸಲಾಯಿತು. ಶಿವಲಿಂಗೇಗೌಡ, ರುದ್ರೇಶ್, ದೇವರಾಜ್, ಸಿದ್ದಪ್ಪ, ಶೇಖರ ನಾಯ್ಕ್ ಇದ್ದರು.
Published on

ಅರಸೀಕೆರೆ: ಪರಿಶಿಷ್ಟ ಜಾತಿ ಮತ್ತು ಪಂಗಡದ ಬಡ ರೈತರ ಕಲ್ಯಾಣಕ್ಕಾಗಿ ಹಲವು ಯೋಜನೆಗಳನ್ನು ಕ್ಷೇತ್ರಕ್ಕೆ ತಂದಿದ್ದೇನೆ ಎಂದು ಶಾಸಕ ಕೆ.ಎಂ.ಶಿವಲಿಂಗೇಗೌಡ ಹೇಳಿದರು.

ಡಾ.ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಮಂಜೂರಾದ ಕೊಳವೆ ಬಾವಿ ಪರಿಕರಗಳನ್ನು ನಗರದ ಪ್ರವಾಸಿ ಮಂದಿರದ ಆವರಣದಲ್ಲಿ ಫಲಾನುಭವಿಗಳಿಗೆ ವಿತರಿಸಿ ಮಾತನಾಡಿದರು. ಬಡ ಹಾಗೂ ಹಿಂದುಳಿದ ವರ್ಗಗಳ ದುಡಿಯುವ ಜನರ ಹಿತಕ್ಕಾಗಿ ಅಂಬೇಡ್ಕರ್ ನಿಗಮದಿಂದ ಮೂರರಿಂದ ಐದು ಲಕ್ಷ ರೂ.ವೆಚ್ಚದಲ್ಲಿ ಕೊಳವೆ ಬಾವಿ ಕೊರೆಸುವ ಜತೆಗೆ ಪರಿಕರಗಳನ್ನೂ ನೀಡಲಾಗಿದೆ. ರೈತರು ಇವುಗಳ ಪ್ರಯೋಜನ ಪಡೆದು ಆರ್ಥಿಕವಾಗಿ ಸಬಲರಾಗಬೇಕು ಎಂದು ಸಲಹೆ ನೀಡಿದರು.

ನಿಗಮದ ಅಧಿಕಾರಿ ರಾಜು ಮಾತನಾಡಿ, ಪ್ರಸಕ್ತ 35 ಫಲಾನುಭವಿಗಳಿಗೆ ಪರಿಕರ ವಿತರಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ರೈತ ಮುಖಂಡರಾದ ರುದ್ರೇಶ್, ದೇವರಾಜ್, ಸಿದ್ದಪ್ಪ, ಶೇಖರ ನಾಯ್ಕ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net