

ಶಿರೋಳ: ಸರ್ಕಾರ ಕಟ್ಟಡ ಕಾರ್ವಿುಕರಿಗೆ ವಿವಿಧ ಸೌಲಭ್ಯ ನೀಡುತ್ತಿದ್ದು, ಕುಟುಂಬದೊಂದಿಗೆ ಉತ್ತಮ ಜೀವನ ನಡೆಸಲು ವಿಮೆ, ಮಕ್ಕಳ ಉನ್ನತ ಶಿಕ್ಷಣಕ್ಕೆ ಆರ್ಥಿಕ ಸಹಾಯ, ಮತ್ತಿತರ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಸರ್.ಎಂ. ವಿಶ್ವೇಶರಯ್ಯ ಮನೆ ಕಟ್ಟಡ ಇತರ ನಿರ್ಮಾಣ ಕೂಲಿ ಕಾರ್ವಿುಕರ ಸಂಘದ ಅಧ್ಯಕ್ಷ ಬಸವರಾಜ ಹೂಗಾರ ಹೇಳಿದರು.
ಗ್ರಾಮದಲ್ಲಿ ಸರ್.ಎಂ. ವಿಶ್ವೇಶ್ವರರಯ್ಯ ಮನೆ ಕಟ್ಟಡ ಇತರ ನಿರ್ಮಾಣ ಕೂಲಿ ಕಾರ್ವಿುಕರ ಸಂಘದ ವತಿಯಿಂದ ಸ್ವಾತಂತ್ರ್ಯೊತ್ಸವ ಹಾಗೂ ಗಾಮದ ಸಂತೆ ಮಾರುಕಟ್ಟೆಯಲ್ಲಿ ಸಸಿಗಳನ್ನು ನೆಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಉಮೇಶ ಮರಿಗುದ್ದಿ, ಅಲ್ಲಾಭಕ್ಷಿ ನೀಲಗುಂದ, ಗಿರೀಶ ಗಾಣಗೇರ, ಶರಣಪ್ಪ ಮೆಣಸಗಿ, ವಿರೂಪಾಕ್ಷಿ ಬನ್ನಿಗಿಡದ, ಈರಣ್ಣ ಅಂಗಡಿ, ಮೈಲಾರಪ್ಪ ಕುಂಬಾರ, ಈರಣ್ಣ ಚಂಗಳಿ, ನಿಜಗುಣಿ ದಿಂಡಿ, ಯಮನಪ್ಪ ಬಾರಕೇರ, ಶ್ರೀಕಾಂತ ಮೆಣಸಗಿ, ಇತರರಿದ್ದರು.