ಧಗ್ರಾ ಯೋಜನೆ ಸದುಪಯೋಗ ಪಡಿಸಿಕೊಳ್ಳಿ

18 upbr 1-wheel chair vitarane
Published on

ಉಪ್ಪಿನಬೆಟಗೇರಿ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಧರ್ಮಾಧಿಕಾರಿ ಡಾ. ಶ್ರೀ ವೀರೇಂದ್ರ ಹೆಗ್ಗಡೆ ಅವರು ರಾಜ್ಯದಲ್ಲಿ ಸ್ವ ಸಹಾಯ ಸಂಘಗಳನ್ನು ಸ್ಥಾಪಿಸಿ ಅದರ ಮೂಲಕ ಬಡ ಹಾಗೂ ನಿರ್ಗತಿಕರು ಸೇರಿ ದೈಹಿಕ ನ್ಯೂನತೆ ಹೊಂದಿದವರಿಗೆ ವಿವಿಧ ಯೋಜನೆಯಡಿ ಸಲಕರಣೆ ವಿತರಿಸುತ್ತಿದ್ದಾರೆ ಎಂದು ಗ್ರಾಮಾಭಿವೃದ್ಧಿ ವಲಯ ಮೇಲ್ವಿಚಾರಕಿ ಪಲ್ಲವಿ ಶೆಟ್ಟಿ ಅಭಿಪ್ರಾಯಪಟ್ಟರು.

ಗ್ರಾಮದಲ್ಲಿ ಕಳೆದ ಹತ್ತಾರು ವರ್ಷಗಳಿಂದ ದೈಹಿಕ ನ್ಯೂನತೆಯಿಂದ ಬಳಲುತ್ತಿರುವ ಕಮಲಾಬಾಯಿ ಓರಣಕರ ಎಂಬುವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ವತಿಯಿಂದ ಮಂಜೂರಾದ ವ್ಹೀಲ್ ಚೇರ್ ವಿತರಿಸಿ ಅವರು ಮಾತನಾಡಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಗ್ರಾಮೀಣ ಭಾಗದ ಜನರಿಗೆ ಕುಡಿಯಲು ನೀರಿನ ಅನುಕೂಲ ಕಲ್ಪಿಸಲು ಕೆರೆಗಳ ಪುನಶ್ಚೇತನ, ಬಡ ಕುಟುಂಬಗಳು ಆರ್ಥಿಕವಾಗಿ ಮುಂದೆ ಬರಲು ಸ್ವ ಉದ್ಯೋಗ ಕೈಗೊಳ್ಳಲು ಸಂಘದಿಂದ ಕಡಿಮೆ ಬಡ್ಡಿ ದರದಲ್ಲಿ ಸಾಲ ವಿತರಣೆ ಸೇರಿ ಇನ್ನೂ ಹತ್ತು ಹಲವು ಯೋಜನೆಗಳು ಶ್ರೀ ಕ್ಷೇತ್ರದಿಂದ ಜನರಿಗೆ ನೇರವಾಗಿ ತಲುಪಿಸುವ ವ್ಯವಸ್ಥೆ ಸಂಘದಿಂದ ಮಾಡಲಾಗುತ್ತಿದೆ ಎಂದರು.

ಯೋಜನೆಯ ತಾಲೂಕು ಯೋಜನಾಧಿಕಾರಿ ಅಶೋಕ ಕೆ. ಮಾತನಾಡಿ, ಶ್ರೀ ಧರ್ಮಸ್ಥಳ ಧರ್ವಧಿಕಾರಿಗಳು ಗ್ರಾಮಾಭಿವೃದ್ಧಿ ಯೋಜನೆಯಿಂದ ಹಲವಾರು ಯೋಜನೆಗಳು ಜನರಿಗೆ ತಲುಪುತ್ತಿದ್ದು, ಅದರಲ್ಲಿ ದೈಹಿಕ ನ್ಯೂನತೆ ಹೊಂದಿದವರಿಗೆ ಜನ ಮಂಗಲ ಯೋಜನೆಯಡಿ ಮಲಗಿದಲ್ಲಿಯೇ ಇರುವವರಿಗೆ ವಾಟರ್ ಬೆಡ್, ನಡೆದಾಡಲು ಅಸಾಧ್ಯವಾದವರಿಗೆ ಕುಳಿತುಕೊಂಡು ಓಡಾಡಲು ವ್ಹೀಲ್ ಚೇರ್, ಶೌಚಗೃಹಕ್ಕೆ ಕಮೋಡ್ ಕುರ್ಚಿ, ಅಲ್ಪ ಮಟ್ಟಿಗೆ ನಡೆದಾಡಲು ಊರುಗೋಲು, ಕೈಗಳ ಸಹಾಯದಿಂದ ನಡೆದಾಡಲು ಶೇಫ್ ವಾಕರ್ ಸೇರಿ ಇನ್ನೂ ಅನೇಕ ಸಲಕರಣೆಗಳನ್ನು ಉಚಿತವಾಗಿ ವಿತರಿಸುತ್ತಿದ್ದಾರೆ. ಈ ಯೋಜನೆಯು ಸಂಘದಲ್ಲಿರುವ ಸದಸ್ಯರು ಮಾತ್ರವಲ್ಲದೆ, ಸದಸ್ಯರಲ್ಲದವರೂ ಪಡೆದುಕೊಳ್ಳಬಹುದು ಎಂದರು.

ಗಾಯತ್ರಿ ಸಂಘದ ಉಪಾಧ್ಯಕ್ಷೆ ಗೀತಾ ಕಾಟವೆ, ಸೇವಾ ಪ್ರತಿನಿಧಿ ನೀಲಾ ಚಂದರಗಿ, ಗ್ರಾಪಂ ಮಾಜಿ ಸದಸ್ಯೆ ವನಿತಾ ಶಿನಗಾರಿ, ಆಶಾ ಕಾರ್ಯಕರ್ತೆಯರಾದ ಗೀತಾ ಓರಣಕರ, ರೂಪಾ ಈಸರಗೊಂಡ ಹಾಗೂ ಸಂಘದ ಸದಸ್ಯರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net