ಪರಿಹಾರ ಧನ ಸದ್ಬಳಕೆ ಮಾಡಿಕೊಳ್ಳಿ

Make good use of compensation money
ತಾಳಿಕೋಟೆ ತಾಲೂಕಿನ ಪಡೇಕನೂರ ಗ್ರಾಮದಲ್ಲಿ ಇತ್ತೀಚೆಗೆ ವಿದ್ಯುತ್​ ಅವಡದಿಂದ ಮತಪಟ್ಟ ಭಾರತಿ ಮತ್ತು ಭಾಗ್ಯಶ್ರೀ ಅವರ ಕುಟುಂಬಕ್ಕೆ ಹೆಸ್ಕಾ ವತಿಯಿಂದ ನೀಡಲಾದ 10 ಲ ರೂ. ಚೆಕ್​ನ್ನು ಲೋಕಾಯುಕ್ತ ನ್ಯಾ. ಬಿ.ಎಸ್​. ಪಾಟೀಲ ವಿತರಿಸಿದರು. ಸಿದ್ರಾಮ ಬಿರಾದಾರ, ಟಿ. ಮಲ್ಲೇಶ್​, ಪರಶುರಾಮ ಮಾದರ ಇತರರಿದ್ದಾರೆ.
Published on

ತಾಳಿಕೋಟೆ: ವಿದ್ಯುತ್​ ಅವಡದಲ್ಲಿ ಮೃತಪಟ್ಟವರಿಗೆ ಹೆಸ್ಕಾಂ ಇಲಾಖೆ ನೀಡಿದ ಪರಿಹಾರ ಧನವನ್ನು ಪೋಲು ಮಾಡದೆ ಮಕ್ಕಳ ಭವಿಷ್ಯಕ್ಕಾಗಿ ಬ್ಯಾಂಕ್​ನಲ್ಲಿ ಠೇವಣಿ ಇಟ್ಟು, ಸದ್ಬಳಕೆ ಮಾಡಿಕೊಳ್ಳಿ ಎಂದು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್​. ಪಾಟೀಲ ಹೇಳಿದರು.

ಇತ್ತೀಚೆಗೆ ತಾಲೂಕಿನ ಪಡೇಕನೂರ ಗ್ರಾಮದ ಚನ್ನಪ್ಪಗೌಡ ಪಾಟೀಲ ಅವರ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ತಗಡಿನ ಶೆಡ್​ ಮೇಲೆ ಮುಖ್ಯ ವಿದ್ಯುತ್​ ತಂತಿ ತುಂಡರಿಸಿ ಬಿದ್ದ ಪರಿಣಾಮ ವಿದ್ಯುತ್​ ಶಾಕ್​ ಹೊಡೆದು ಸ್ಥಳದಲ್ಲೇ ಮೃತಪಟ್ಟಿದ್ದ ಭಾರತಿ ಮಾದರ ಹಾಗೂ ಮಗಳಾದ ಭಾಗ್ಯಶ್ರೀ ಅವರ ಕುಟುಂಬಕ್ಕೆ ಶನಿವಾರ ಹೆಸ್ಕಾಂನಿಂದ ನೀಡಲಾದ ತಲಾ 5 ಲಕ್ಷ ರೂ. ಚೆಕ್​ನ್ನು ಭಾರತಿ ಮಾದರ ಅವರ ಪತಿ ಪರಶುರಾಮ ಮಾದರ ಅವರಿಗೆ ವಿತರಿಸಿ ಅವರು ಮಾತನಾಡಿದರು.

ಬಸವನ ಬಾಗೇವಾಡಿ ಹೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರ ಸಿದ್ರಾಮ ಬಿರಾದಾರ, ವಿಜಯಪುರ ಲೋಕಾಯುಕ್ತ ಅಧೀಕ ಟಿ. ಮಲ್ಲೇಶ್​, ಲೋಕಾಯುಕ್ತ ಡಿವೈಎಸ್​ಪಿ ಸುರೇಶ ರೆಡ್ಡಿ, ಇನ್ಸ್​ಪೆಕ್ಟರ್​ರಾದ ಆನಂದ ಟಕ್ಕಣ್ಣವರ, ಆನಂದ ಡೋಣಿ, ಕೆಬಿಜೆಎನ್​ಎಲ್​ ಸಹಾಯಕ ಇಂಜಿನಿಯರ್​ ವಿಶ್ವನಾಥ ಬಿರಾದಾರ, ಕಾರ್ಯನಿರ್ವಾಹಕ ಅಧಿಕಾರಿ ವೆಂಕಟೇಶ ವಂದಾಲ, ತಾ.ಪಂ, ಇಒ ವೆಂಕಟೇಶ ವಂದಾಲ, ಸಹಾಯಕ ನಿರ್ದೇಶಕಿ ಸುಜಾತಾ ಯಡ್ರಾಮಿ, ಪಿಡಿಒ ಸಾವಿತ್ರಿ ಬಿರಾದಾರ, ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಮತ್ತು ತಾಲೂಕಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net