ವಾಹನಗಳಿಗೆ ಎಮಿಷನ್ ಕಡ್ಡಾಯಗೊಳಿಸಿ

ವಾಯುಮಾಲಿನ್ಯ ನಿಯಂತ್ರಣ ಪ್ರಮಾಣಪತ್ರವನ್ನು (ಎಮಿಷನ್ ಟೆಸ್ಟ್) ಎಲ್ಲ ವಾಹನಗಳಿಗೂ ಕಡ್ಡಾಯಗೊಳಿಸಬೇಕು. ನಿಯಮ ಉಲ್ಲಂಸುವ ವಾಹನ ಮಾಲೀಕರಿಗೆ ದಂಡ ವಿಧಿಸುವ ಕ್ರಮಕ್ಕೆ ಸಾರಿಗೆ ಅಧಿಕಾರಿಗಳು ಮುಂದಾಗಬೇಕು ಎಂದು ರಾಜ್ಯ ವಾಯುಮಾಲಿನ್ಯ ತಪಾಸಣಾ ಕೇಂದ್ರಗಳ ಮಾಲೀಕರ ಸಂಘದ ಅಧ್ಯಕ್ಷ ತಿಮ್ಮೇಗೌಡ ಹೇಳಿದ್ದಾರೆ.
masacharane
ನಗರದಲ್ಲಿ ರಾಜ್ಯ ವಾಯು ಮಾಲಿನ್ಯ ತಪಾಸಣಾ ಕೇಂದ್ರಗಳ ಮಾಲೀಕರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ವಾಯು ವಾಲಿನ್ಯ ನಿಯಂತ್ರಣ ವಾಸಾಚರಣೆಯಲ್ಲಿ ಆರ್‌ಟಿಒ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.folder
Published on: 

ಬೆಂಗಳೂರು: ವಾಯುಮಾಲಿನ್ಯ ನಿಯಂತ್ರಣ ಪ್ರಮಾಣಪತ್ರವನ್ನು (ಎಮಿಷನ್ ಟೆಸ್ಟ್) ಎಲ್ಲ ವಾಹನಗಳಿಗೂ ಕಡ್ಡಾಯಗೊಳಿಸಬೇಕು. ನಿಯಮ ಉಲ್ಲಂಸುವ ವಾಹನ ಮಾಲೀಕರಿಗೆ ದಂಡ ವಿಧಿಸುವ ಕ್ರಮಕ್ಕೆ ಸಾರಿಗೆ ಅಧಿಕಾರಿಗಳು ಮುಂದಾಗಬೇಕು ಎಂದು ರಾಜ್ಯ ವಾಯುಮಾಲಿನ್ಯ ತಪಾಸಣಾ ಕೇಂದ್ರಗಳ ಮಾಲೀಕರ ಸಂಘದ ಅಧ್ಯಕ್ಷ ತಿಮ್ಮೇಗೌಡ ಹೇಳಿದ್ದಾರೆ.

ರಾಜ್ಯ ವಾಯುಮಾಲಿನ್ಯ ತಪಾಸಣಾ ಕೇಂದ್ರಗಳ ಮಾಲೀಕರ ಸಂಘದ ವತಿಯಿಂದ ನಗರದಲ್ಲಿ ಹಮ್ಮಿಕೊಂಡಿದ್ದ ವಾಯುವಾಲಿನ್ಯ ನಿಯಂತ್ರಣ ವಾಸಾಚರಣೆ ಕಾರ್ಯಕ್ರಮದಲ್ಲಿ ಆರ್‌ಟಿಒ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಮಾತನಾಡಿದರು. ಸಮರ್ಪಕವಾಗಿ ನಿರ್ವಹಣೆ ಮಾಡದ ಹಾಗೂ 15 ವರ್ಷ ಮೀರಿದ ವಾಹನಗಳಲ್ಲಿ ಹೆಚ್ಚಿನ ಹೊಗೆ ಹೊರಬರುತ್ತಿದೆ. ಇದು ವಾಯುಮಾಲಿನ್ಯಕ್ಕೆ ಕಾರಣವಾಗಿದೆ. ಎಮಿಷನ್ ಪರೀಕ್ಷೆಯನ್ನು ಸರ್ಕಾರವು ಕಡ್ಡಾಯ ಮಾಡಿದ್ದು, ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು ಎಂದು ತಿಳಿಸಿದರು.

ಬೇರೆ ರಾಜ್ಯಗಳ ತೆರಿಗೆ ವಸೂಲಿ ಕೇಂದ್ರಗಳಲ್ಲಿ ವಾಹನಗಳ ದಾಖಲೆಗಳನ್ನು ಡಿಜಿಟಲ್ ಮೂಲಕ ಪರಿಶೀಲಿಸಲಾಗುತ್ತಿದೆ. ಸಮರ್ಪಕವಾಗಿ ದಾಖಲೆ ಇಲ್ಲದೆ ಇರುವುದು ಕಂಡುಬಂದರೆ ದಂಡ ವಿಧಿಸಲಾಗುತ್ತಿದೆ. ಈ ವ್ಯವಸ್ಥೆಯನ್ನು ಕರ್ನಾಟಕದಲ್ಲಿಯೂ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.

ಸಂಘದ ಪ್ರಧಾನ ಕಾರ್ಯದರ್ಶಿ ಸತೀಶ್ ವಾತನಾಡಿ, ವಾಯುವಾಲಿನ್ಯ ನಿಯಂತ್ರಿಸಲು ಪ್ರತಿಯೊಂದು ವಾಹನಕ್ಕೂ ಎಮಿಷನ್ ಪರೀಕ್ಷೆ ಕಡ್ಡಾಯವಾಗಬೇಕು. ಪರೀಕ್ಷೆ ವಾಡಿಸದ ವಾಹನಗಳನ್ನು ಸ್ವಯಂಚಾಲಿತ ಕ್ಯಾಮರಾಗಳ ಮೂಲಕ ಗುರುತಿಸಿ ದಂಡ ವಿಧಿಸಬೇಕು ಎಂದರು.

ಮನವಿಗೆ ಸ್ಪಂದಿಸಿದ ಆರ್‌ಟಿಒ ಸೌಂದರ್ಯ ಆದರ್ಶ್, ಮಾಸಾಚರಣೆಯಲ್ಲಿ ವಾಯುಮಾಲಿನ್ಯ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಪ್ರಮಾಣ ಪತ್ರವಿಲ್ಲದೆ ವಾಹನ ಚಲಾಯಿಸುತ್ತಿರುವುದು ಕಂಡುಬಂದರೆ ದಂಡ ವಿಧಿಸಲಾಗುವುದು ಎಂದು ಹೇಳಿದರು.