

ಮುಂಡಗೋಡ: ಪ್ರತಿಯೊಬ್ಬರೂ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ನೀಡಿ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡುವುದು ಅವಶ್ಯಕ ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.
ತಾಲೂಕಿನ ಉಗ್ಗಿನಕೇರಿ ಗ್ರಾಮದಲ್ಲಿ ಕೆಪಿಸಿಸಿ ಸದಸ್ಯ ವಿವೇಕ ಹೆಬ್ಬಾರ ಒಡೆತನದ ವಿಐಎನ್‌ಪಿ ಇನ್ಫ್ರಾ ಪ್ರಾಜೆಕ್ಟ್ ಪ್ರೈವೇಟ್ ಲಿಮಿಟೆಡ್‌ನ ಸಿಎಸ್‌ಆರ್ ಅನುದಾನದಲ್ಲಿ 21.34ಲಕ್ಷ ರೂ. ವೆಚ್ಚದಲ್ಲಿ ಉಗ್ಗಿನಕೇರಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ನಿರ್ಮಿಸಿರುವ ನೂತನ ಕೊಠಡಿಯನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.
ವಿವೇಕ ಹೆಬ್ಬಾರ ಸಮರ್ಪಣಾ ಪತ್ರವನ್ನು ಮುಖ್ಯಾಧ್ಯಾಪಕರಿಗೆ ಹಸ್ತಾಂತರಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಜಿ. ಸುಮಾ, ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಕೃಷ್ಣ ಹಿರೇಹಳ್ಳಿ, ಉಪಾಧ್ಯಕ್ಷ ಮಹಮ್ಮದ್ ರಜಾಖಾನ್ ಪಠಾಣ, ಧರ್ಮರಾಜ ನಡಿಗೇರ, ಎಚ್.ಎಂ. ನಾಯ್ಕ, ದೇವು ಪಾಟೀಲ, ವೈ.ಪಿ. ಭುಜಂಗಿ, ಬಸವರಾಜ ನಡುವಿನಮನಿ, ರಾಜು ಕುಟ್ರಿ, ಮೌಲಾಸಾಬ ನದಾಫ್, ಶಾರದಾ ರಾಠೋಡ ಮುಂತಾದವರಿದ್ದರು.