

ಮೈಸೂರು: ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷಿನ್ ಅಡಿಯಲ್ಲಿ(ಎನ್‌ಆರ್‌ಎಲ್‌ಎಂ) ಗ್ರಾಮೀಣ ಭಾಗದ ಸಾಕಷ್ಟು ಮಹಿಳೆಯರು ಆರ್ಥಿಕವಾಗಿ ಸದೃಡಗೊಳುತ್ತಿದ್ದು, ಇನ್ನಷ್ಟು ವಿನೂತನ ರೀತಿಯಲ್ಲಿ ಉಪಯುಕ್ತವಾಗುವಂತಹ ವಿವಿಧ ಉತ್ಪನ್ನಗಳನ್ನು ತಯಾರಿಸಿ ತಮ್ಮದೇ ಬ್ರ್ಯಾಂಡ್‌ಅನ್ನು ಸೃಷ್ಟಿಸಿಕೊಳ್ಳುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಗಾಯಿತ್ರಿ ತಿಳಿಸಿದರು.
ನಂಜನಗೂಡು ತಾಲೂಕಿನ ಹದಿನಾರು ಗ್ರಾಮ ಪಂಚಾಯಿತಿಗೆ ಬುಧವಾರ ಭೇಟಿ ನೀಡಿದ ಅವರು, ವಿಧ ಇಲಾಖೆಯ ಹಲವು ಯೋಜನೆಗಳ ಕುರಿತು ಪ್ರಗತಿ ಪರಿಶೀಲನೆ ಸಭೆ ನಡೆಸಿ ಮಾತನಾಡಿದರು.
ಸಂಜೀವಿನಿ ಸಂಘಗಳಿಂದ ನೀಡಲಾಗುವ ಪ್ರೋತ್ಸಾಹಧನನ್ನು ಮಹಿಳೆಯರು ವಿನೂತನ ರೀತಿಯಲ್ಲಿ ಬಳಿಕೆ ಮಾಡುಬೇಕು. ವಿವಿಧ ತಿನಿಸುಗಳ ತಯಾರಿಕೆ, ಗೊಬ್ಬರ ತಯಾರಿಕೆ, ಅಣಬೆ ಬೆಳೆಯುವುದು, ಬಾಳೆಕಾಯಿ ಚಿಪ್ಸ್, ಬಾಳೆ ದಿಂಡಿನಿಂದ ಜ್ಯೂಸ್, ಅದರ ತ್ಯಾಜ್ಯಗಳಿಂದ ಗೊಬ್ಬರ ತಯಾರಿಕೆ ಹೀಗೆ ವಿನೂತನ ರೀತಿಯಲ್ಲಿ ಉತ್ಪಾದನೆ ಮಾಡಿ ಅವುಗಳಿಗೆ ಕ್ರಿಯಾತ್ಮಕವಾಗಿ ಬೇಡಿಕೆ ಹೆಚ್ಚಿಸಿಕೊಂಡು ಸ್ವಾವಲಂಭಿ ಬದುಕು ಕಟ್ಟಿಕೊಳ್ಳುವಂತೆ ಜೀವನ ಪಾಠ ಮಾಡಿದರು.