ಡಯಾಲಿಸಿಸ್ ಯಂತ್ರಗಳು ಬಡವರಿಗೆ ಬಳಕೆಯಾಗಲಿ

h30-rotary
Published on

ಹುಬ್ಬಳ್ಳಿ: ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಸೆಂಟ್ರಲ್ ವತಿಯಿಂದ ಇಲ್ಲಿನ ಕಿಮ್್ಸ ಆಸ್ಪತ್ರೆಗೆ 6 ಡಯಾಲಿಸಿಸ್ ಯಂತ್ರಗಳನ್ನು ಶನಿವಾರ ದೇಣಿಗೆಯಾಗಿ ನೀಡಲಾಯಿತು.

ಕ್ಲಬ್​ನ ಜಿಲ್ಲಾ ಗವರ್ನರ್ ನಾಸೀರ್ ಬೊರ್ಸದ್ವಾಲಾ ಅವರು ಮಾತನಾಡಿ, ಕಳೆದ ಜೂನ್​ನಲ್ಲಿ 6 ಡಯಾಲಿಸಿಸ್ ಯಂತ್ರಗಳನ್ನು ದೇಣಿಗೆಯಾಗಿ ನೀಡಲಾಗಿತ್ತು. ಈಗ ಮತ್ತೆ 6 ದೇಣಿಗೆ ನೀಡಿದ್ದೇವೆ. ಇವು ಬಡ ಮಧುಮೇಹಿಗಳಿಗೆ ಅನುಕೂಲವಾಗಲಿ ಎಂದರು.

ಅಧ್ಯಕ್ಷೆ ರೀಟಾ ಹಂಡಾ, ಕಾರ್ಯದರ್ಶಿ ಸ್ನೇಹಲತಾ, ಡಾ. ನಾಗರೆಖಾ ಹೆಬಸೂರ, ಸಹಾಯಕ ಗವರ್ನರ್ ಸೈಮನ್ ಡಿಸೋಜಾ, ಅಶೋಕ ಪಾಟೀಲ, ಕಿಮ್್ಸ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ, ಎಂಎಸ್ ಡಾ. ಅರುಣಕುಮಾರ ಸಿ., ಪ್ರಾಚಾರ್ಯ ಡಾ. ಈಶ್ವರ ಹೊಸಮನಿ, ಡಾ. ವೆಂಕಟೇಶ ಮೊಗೇರ, ಡಾ. ಗೋಪಾಲ, ಮಂಜುನಾಥ ಹೊಂಬಳ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net