ಮಕ್ಕಳ ಮನಸ್ಸು ಸೃಜನಶೀಲಗೊಳಿಸಿ

Make children's minds creative
ಸಿಂದಗಿ ಪಟ್ಟಣದ ಮಕ್ಕಳ ಕಲ್ಯಾಣ ಪ್ರತಿಷ್ಠಾನದ ಕ್ರಿಯೇಟಿವ್​ ಕಿಡ್ಸ್​ ಹೋಮ್​ ಪೂರ್ವ ಪ್ರಾಥಮಿಕ ಶಾಲೆ ಸಭಾಭವನದಲ್ಲಿ ಕ್ರಿಯೇಟಿವ್​ ಡೇ ಆಚರಿಸಲಾಯಿತು.
Published on

ಸಿಂದಗಿ: ಮನೆ ಹಾಗೂ ಶಾಲೆಗಳಲ್ಲಿ ಮಕ್ಕಳಿಗೆ ಕ್ರಿಯಾತ್ಮಕ ಸಲಹೆಗಳ ಮೂಲಕ ಅವರ ಮನಸ್ಸು ಸೃಜನಶೀಲವಾಗಿಸಬೇಕು ಎಂದು ಮಕ್ಕಳ ಕಲ್ಯಾಣ ಪ್ರತಿಷ್ಠಾನದ ಕಾರ್ಯದರ್ಶಿ ಡಾ. ಜ್ಯೋತಿ ಪೂಜಾರ ಹೇಳಿದರು.

ಪಟ್ಟಣದ ಮಕ್ಕಳ ಕಲ್ಯಾಣ ಪ್ರತಿಷ್ಠಾನದ ಕ್ರಿಯೇಟಿವ್​ ಕಿಡ್ಸ್​ ಹೋಮ್​ ಪೂರ್ವ ಪ್ರಾಥಮಿಕ ಶಾಲೆ ಸಭಾಭವನದಲ್ಲಿ ಬುಧವಾರ ಹಮ್ಮಿಕೊಂಡ ಕ್ರಿಯೇಟಿವ್​ ಡೇ(ಸೃಜನಶೀಲ ದಿನ) ಕಾರ್ಯಕ್ರಮದ ಅಧ್ಯತೆ ವಹಿಸಿ ಮಾತನಾಡಿ, ಸೃಜನಶೀಲ ಚಟುವಟಿಕೆ ಹಮ್ಮಿಕೊಳ್ಳುವುದರಿಂದ ಮಕ್ಕಳಲ್ಲಿ ಹೊಸ ಕಲ್ಪನೆಗಳು, ಚಿಂತನೆಗಳು ಮೂಡುತ್ತವೆ ಎಂದರು.

ಶಾಲಾ ವಿದ್ಯಾರ್ಥಿಗಳು ಪ್ರಾಣಿ, ಪ, ಪರಿಸರ, ವಿಜ್ಞಾನ, ಗಣಿತ ಹಾಗೂ ಇತಿಹಾಸಕ್ಕೆ ಸಂಬಂಧಿಸಿದ ಮಾದರಿಗಳ ಸೃಜನಶೀಲ ಕಲೆಯನ್ನು ಪ್ರದರ್ಶಿಸಿ ಅವುಗಳ ಕುರಿತು ವಿವರಿಸಿದರು.

ಶಿಕಿ ಮಂಗಲಾ ಬಮ್ಮಣ್ಣಿ, ಸಾಧನಾ ಇಮಡೆ, ಗೌರಿ ಪಾಟೀಲ, ಶಾಂತಾ ಮೊಸಲಗಿ, ಸುಕನ್ಯಾ ಹುಬ್ಬಳ್ಳಿ, ಪ್ರೀತಿ ಪಟ್ಟಣಶೆಟ್ಟಿ, ಲಕ್ಷಿ$್ಮ ಬಡಿಗೇರ ಹಾಗೂ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net