ಮಕ್ಕಳಿಗೆ ಕೃಷಿ, ರೈತರ ಬಗ್ಗೆ ಗೌರವ ಭಾವ ಮೂಡಿಸಿ

25 MDG 3
Published on

ಮುಂಡರಗಿ: ರೈತ ಹಾಗೂ ಕೃಷಿ ಬಗ್ಗೆ ಅಸಡ್ಡೆ ಭಾವನೆ ತೋರಿದರೆ ಭವಿಷ್ಯದಲ್ಲಿ ಸಂಕಷ್ಟ್ಟಕ್ಕೆ ಈಡಾಗಬೇಕಾಗುತ್ತದೆ. ವಿದ್ಯಾರ್ಥಿ ದೆಸೆಯಲ್ಲಿ ಮಕ್ಕಳಿಗೆ ಕೃಷಿ ಹಾಗೂ ರೈತರ ಬಗ್ಗೆ ಗೌರವ ಭಾವ ಮೂಡಿಸಬೇಕು ಎಂದು ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಶಿವಾನಂದ ಇಟಗಿ ಹೇಳಿದರು.

ಪಟ್ಟಣದ ಪುರಸಭೆ ವ್ಯಾಪ್ತಿಯ ರಾಮೇನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ರೈತ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮುಖ್ಯ ಶಿಕ್ಷಕ ಡಾ.ನಿಂಗು ಸೊಲಗಿ ಮಾತನಾಡಿದರು. ಎಸ್.ಡಿ.ಎಂ.ಸಿ ಅಧ್ಯಕ್ಷ ಮಹೇಶ ಬಾಗಳಿ ಅಧ್ಯಕ್ಷತೆ ವಹಿಸಿದ್ದರು. ರೈತ ಮುಖಂಡ ಚಂದ್ರಪ್ಪ ಗದ್ದಿ, ಬಸವರಾಜ ತಿಗರಿ, ಯಲ್ಲಪ್ಪ ಜಂಬಗಿ ಹಾಗೂ ಎಸ್.ಡಿ.ಎಂ.ಸಿ. ಸದಸ್ಯರು ಇದ್ದರು. ಶಿಕ್ಷಕರಾದ ಎಂ.ಆರ್. ಗುಗ್ಗರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪಿ.ಎಂ. ಲಾಂಡೆ ಸ್ವಾಗತಿಸಿದರು. ಪಿ.ಆರ್. ಗಾಡದ ಕಾರ್ಯಕ್ರಮ ನಿರೂಪಿಸಿದರು. ಶಿವಲೀಲಾ ಅಬ್ಬಿಗೇರಿ ವಂದಿಸಿದರು.

ಮಕ್ಕಳಿಂದ ಭಾವಾಭಿನಯದ ಭಾಷಣ

ವಿಜಯವಾಣಿ ದಿನಪತ್ರಿಕೆಯಲ್ಲಿ ಡಿ.4ರಂದು ಕೃಷಿಕ ಮಹಿಳೆಯರ ದಿನದ ನಿಮಿತ್ತ ರೈತನಾರಿ ಎಂಬ ಶೀರ್ಷಿಕೆಯಡಿ ಹತ್ತು ಕೃಷಿಕ ಮಹಿಳಾ ಸಾಧಕ ಕುರಿತು ಪ್ರಕಟಗೊಂಡಿದ್ದ ವಿಶೇಷ ಲೇಖನವನ್ನು ಆಯಾ ಸಾಧಕ ಕೃಷಿಕ ಮಹಿಳೆಯರ ಯಶೋಗಾಥೆ ಕುರಿತು ನಾಲ್ಕನೇ ತರಗತಿಯ 13 ಮಕ್ಕಳು ಒಬ್ಬೊಬ್ಬ ಕೃಷಿಕ ಸಾಧಕ ಮಹಿಳೆ ಕುರಿತು ಭಾವಾಭಿನಯದ ಭಾಷಣಗಳ ಮೂಲಕ ಮಾತನಾಡಿ ಗಮನ ಸೆಳೆದರು. ವಿದ್ಯಾರ್ಥಿಗಳಿಂದ ನೇಗಿಲಯೋಗಿ ಹಾಗೂ ಅನ್ನದಾತ ನೃತ್ಯ ರೂಪಕಗಳು ಪ್ರದರ್ಶನಗೊಂಡವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net