

ಮುಳಗುಂದ: ಪ್ರಾಥಮಿಕ ಹಂತದಲ್ಲಿ ಮಕ್ಕಳಿಗೆ ವಿಜ್ಞಾನ ವಸ್ತುಗಳನ್ನು ಸಿದ್ಧಪಡಿಸುವ ಅರಿವು, ಪ್ರೋತ್ಸಾಹ ನೀಡಬೇಕು. ಮಕ್ಕಳ ಜ್ಞಾನ ಬೆಳವಣಿಗೆಗೆ ಇದು ಪೂರಕವಾಗುತ್ತದೆ ಎಂದು ಅಂಜುಮನ್ ಕಮಿಟಿ ಅಧ್ಯಕ್ಷ ತಾಜುದ್ದೀನ್ ಕಿಂಡ್ರಿ ಅಭಿಪ್ರಾಯಪಟ್ಟರು.
ಇಲ್ಲಿನ ಅಂಜುಮನ್ ಎ ಇಸ್ಲಾಂ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ವಿಜ್ಞಾನ ವಸ್ತು ಪ್ರದರ್ಶನ ವೀಕ್ಷಿಸಿ ಮಾತನಾಡಿದರು. ಶಿಕ್ಷಕರು ನೀಡಿದ ಮಾದರಿ, ನಿರ್ದೇಶನದ ಮೂಲಕ ಸಿದ್ಧಪಡಿಸಿದ್ದ ವಿಜ್ಞಾನ ವಸ್ತುಗಳು ಪ್ರದರ್ಶನ ಹಮ್ಮಿಕೊಂಡಿದ್ದು ಶ್ಲಾಘನೀಯ ಎಂದರು.
ಅಂಜುಮನ್ ಕಮಿಟಿ ಉಪಾಧ್ಯಕ್ಷ ಎ.ಡಿ. ಮುಜಾವರ, ಕಾರ್ಯದರ್ಶಿ ಹೈದರಲಿ ಖವಾಸ, ಮುನ್ನಾ ಡಾಲಾಯತ್, ದಾವಲ ಲಕ್ಷ್ಮೇಶ್ವರ, ದಾವೂದ ಜಮಾಲಸಾಬನವರ, ರಜಾಕಸಾಬ ಡಾಲಾಯತ್, ಪಾಲಕರು, ಶಿಕ್ಷಕರು ಇದ್ದರು.