

ಮೈಸೂರು: ಓದಿನ ಬಗ್ಗೆ ಆಸಕ್ತಿ ಬೆಳೆಸುವ ಹಾಗೂ ಜ್ಞಾನಾರ್ಜನೆಗೂ ಸಹಕಾರಿಯಾಗಿರುವ ಗ್ರಂಥಾಲಯದ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಬೇಕು ಎಂದು ನಟ ಶಿವರಾಜ್‌ಕುಮಾರ್ ಹೇಳಿದರು.
ನಗರದ ಶಕ್ತಿಧಾಮದಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕಲಿಸು ೌಂಡೇಶನ್‌ನ 75ನೇ ಗ್ರಂಥಾಲಯ ಉದ್ಘಾಟಿಸಿ ಮಾತನಾಡಿದರು.
ಶಕ್ತಿಧಾಮದಲ್ಲಿ ಗ್ರಂಥಾಲಯ ಉದ್ಘಾಟನೆಯಾಗುತ್ತಿರುವುದನ್ನು ನೋಡಿ ಖುಷಿ ಆಯಿತು. ಮಕ್ಕಳು ಹೆಚ್ಚು ಹೆಚ್ಚು ಪುಸ್ತಕ ಓದಬೇಕು. ಪುಸ್ತಕವು ಆತ್ಮೀಯ ಸ್ನೇಹಿತರಾಗಬೇಕು. ಈ ಸ್ನೇಹಿತ ನಿಮ್ಮನ್ನು ಜಾಣರಾಗಿ ಮತ್ತು ಬುದ್ಧಿವಂತರನ್ನಾಗಿ ಮಾಡುತ್ತದೆ. ಮಕ್ಕಳ ಕಲಿಕೆಗೆ ಈ ಗ್ರಂಥಾಲಯ ಸಾಕಷ್ಟು ಸಹಾಯ ಮಾಡುತ್ತದೆ, ಶಕ್ತಿಧಾಮದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ ಎಂದರು.
75ನೇ ಸ್ವಾತಂತ್ರ್ಯ ಮಹೋತ್ಸವದ ಸಂದರ್ಭದಲ್ಲಿ ಕಲಿಸು ೌಂಡೇಶನ್ ಸಂಸ್ಥೆ ವತಿಯಿಂದ 75ನೇ ಗ್ರಂಥಾಲಯ ಶಕ್ತಿಧಾಮದಲ್ಲಿ ಆರಂಭವಾಗಿರುವುದು ಹೆಮ್ಮೆಯ ವಿಷಯವಾಗಿದೆ. ಮೈಸೂರು ರಾಜವಂಶಸ್ಥ ಯದುವೀರ್ ಅವರು ಗ್ರಂಥಾಲಯ ಉದ್ಘಾಟಿಸಿದ್ದು, ಜತೆಗೆ ಶಕ್ತಿಧಾಮದ ಮಕ್ಕಳಿಗೆ ಪಾಠ ಮಾಡುತ್ತೇನೆಂದು ಹೇಳಿರುವುದು ನಮ್ಮ ಸೌಭಾಗ್ಯ. ಶಕ್ತಿಧಾಮದ ಶ್ರೇಯೋಭಿವೃದ್ಧಿಗೆ ಮತ್ತಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಸಂತಸವ್ಯಕ್ತಪಡಿಸಿದರು.
ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ, ಕಲಿಸು ಫೌಂಡೇಷನ್ ಮೈಸೂರಿನ ಹೆಮ್ಮೆಯ ಸಂಸ್ಥೆಯಾಗಿದೆ. ಸಂಸ್ಥೆಯು ಸರ್ಕಾರಿ ಶಾಲೆಗಳಲ್ಲಿ 100 ಗ್ರಂಥಾಲಯ ನಿರ್ಮಿಸುವ ಗುರಿ ಹೊಂದಿದ್ದು, ಈಗಾಗಲೇ 75 ಗ್ರಂಥಾಲಯ ನಿರ್ಮಿಸಲಾಗಿದೆ. ಮಕ್ಕಳು ಶಿಕ್ಷಣದ ಜತೆಗೆ ಕೌಶಲ್ಯ ಬೆಳೆಸಿಕೊಳ್ಳಬೇಕು. ಕಲಿಸು ಫೌಂಡೇಷನ್ ಶಕ್ತಿಧಾಮದಲ್ಲಿ ನಿರ್ಮಿಸಿರುವ ಗ್ರಂಥಾಲಯ ಮಕ್ಕಳ ಜ್ಞಾನ ಹೆಚ್ಚಿಸಲಿದೆ. ಡಾ.ರಾಜ್‌ಕುಮಾರ್ ಮತ್ತು ಕುಟುಂಬ ಸಿನಿಮಾ ಜತೆಗೆ ಸಮಾಜದ ಒಳಿತಿಗೆ ಸಾಕಷ್ಟು ಕೊಡುಗೆ ನೀಡುತ್ತಲೇ ಬರುತ್ತಿದೆ. ಇದೀಗ ಶಕ್ತಿಧಾಮದ ಮೂಲಕವೂ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಶ್ರಮಿಸಲಾಗುತ್ತಿದೆ. ಹಾಗಾಗಿ ಶಿವರಾಜ್‌ಕುಮಾರ್ ಹಾಗೂ ಗೀತಾ ಶಿವರಾಜ್‌ಕುಮಾರ್ ಅವರಿಗೆ ಅಭಿನಂದನೆ ಎಂದರು.
ಶಿವರಾಜ್‌ಕುಮಾರ್, ಶಕ್ತಿಧಾಮದ ಟ್ರಸ್ಟಿ ಸದಾನಂದ, ಮಂಜುಳಾ, ಕಲಿಸು ೌಂಡೇಶನ್ ಸಂಸ್ಥಾಪಕ ಎಂ.ಎಂ.ನಿಖಿಲೇಶ್, ಮನೋಜ್, ರಾಮು ಸೇರಿದಂತೆ ಇತರರು ಇದ್ದರು.