ಮಕ್ಕಳಲ್ಲಿ ಸಂಸ್ಕೃತಿ, ಸಂಸ್ಕಾರದ ತಿಳಿವಳಿಕೆ ಮೂಡಿಸಿ

2-SGN-3 DAIVNJNA
Published on

ಶಿಗ್ಗಾಂವಿ: ಇಂದಿನ ಮಕ್ಕಳಿಗೆ ನಮ್ಮ ಸಂಸ್ಕೃತಿ ಮತ್ತು ಸಂಸ್ಕಾರದ ಬಗ್ಗೆ ತಿಳಿವಳಿಕೆ ನೀಡಬೇಕು. ಬಡ ಮಕ್ಕಳನ್ನು ಪ್ರೋತ್ಸಾಹಿಸಿ, ಅವರ ಶೈಕ್ಷಣಿಕ ಜೀವನಕ್ಕೆ ಸಹಾಯ ಮಾಡಬೇಕು ಎಂದು ವಾಸುದೇವ ರಾಯ್ಕರ ಹೇಳಿದರು.

ಪಟ್ಟಣದ ವಿಠಲ ಹರಿಮಂದಿರದಲ್ಲಿ ಭಾನುವಾರ ಏರ್ಪಡಿಸಿದ್ದ ದೈವಜ್ಞ ಸಮಾಜದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಅವರು ಮಾತನಾಡಿದರು. ನಮ್ಮ ಸಮಾಜದ ಮಕ್ಕಳು ಸಹಿತ ಇತರೇ ಮಕ್ಕಳಂತೆ ಉನ್ನತ ದರ್ಜೆಯಲ್ಲಿ ಪಾಸಾದರೂ ಅವರನ್ನು ಪರಿಗಣಿಸುವುದಿಲ್ಲ. ಆದ್ದರಿಂದ ನಮ್ಮ ಸಮಾಜದ ಮಕ್ಕಳನ್ನು ನಾವೇ ಸನ್ಮಾನಿಸುವಂತಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಸಮಾಜದ ಶಿಕ್ಷಣ ಪ್ರೇಮಿ ದತ್ತಣ್ಣ ವೇರ್ಣೆಕರ ಮಾತನಾಡಿ, ಇಂದಿನ ಮಕ್ಕಳು ಮೊಬೈಲ್​ಫೋನ್​ನಿಂದ ದೂರವಿದ್ದಾಗ ಮಾತ್ರ ಏನನ್ನಾದರೂ ಸಾಧಿಸಬಹುದು ಇಲ್ಲದಿದ್ದರೆ ಖಿನ್ನತೆಗೆ ಒಳಗಾಗುತ್ತಾರೆ ಎಂದರು.

ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕ ಪಡೆದ ಸ್ಪಂದನಾ ಮಂಜುನಾಥ ವೇರ್ಣೆಕರ, ಗೌರಿ ಆನಂದ ವೇರ್ಣೆಕರ ಅವರನ್ನು ಸನ್ಮಾನಿಸಲಾಯಿತು. ಸಮಾಜದ ಅಧ್ಯಕ್ಷ ಸುಧಾಕರ ದೈವಜ್ಞ, ಉಪಾಧ್ಯಕ್ಷ ಸಂಕೇತ ರಾಯ್ಕರ, ಕಾರ್ಯದರ್ಶಿ ರವಿ ರಾಯ್ಕರ, ಪ್ರಕಾಶ ಪಾಲನಕರ, ವಿನಾಯಕ ರಾಯ್ಕರ, ನಾಗೇಶ ರಾಯ್ಕರ, ಗಜಾನನ ಕುಡತರಕರ, ಭೂಷಣ ರೇವಣಕರ, ಮಂಜುನಾಥ ವೇರ್ಣೆಕರ, ಆನಂದ ವೇರ್ಣೆಕರ, ರಾಘವೇಂದ್ರ ದೈವಜ್ಞ, ಗಜಾನನ ಶೇಜವಾಡಕರ, ಗಣೇಶ ದೈವಜ್ಞ, ಸುರೇಶ ಪಾಲನಕರ, ಪ್ರದೀಪ ವೇರ್ಣೆಕರ, ಮನೋಜ ರಾಯ್ಕರ, ಗಜಾನನ ಶಿರೋಡಕರ, ಸಂತೋಷ ರಾಯ್ಕರ, ಸೂರಜ ರಾಯ್ಕರ, ಸೇರಿ ಮಹಿಳಾ ಮಂಡಳದ ಸದಸ್ಯೆಯರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net