ಮಕ್ಕಳಲ್ಲಿ ಸಂಸ್ಕೃತಿಯ ಅರಿವು ಮೂಡಲಿ

08 RON 4
ರೋಣ ಪಟ್ಟಣದ ಬಿ.ಆರ್.ಸಿ. ಸಭಾಂಗಣದಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ವತಿಯಿಂದ ಜರುಗಿದ ತಾಲ್ಲೂಕು ಮಟ್ಟದ ಸ್ಕೌಟ್ಸ್ ಮಾಸ್ಟರ್ಸ್ ಮತ್ತು ಗೈಡ್ಸ್ ಕ್ಯಾಪ್ಟನ್ ಅವರ ಸಾಮಾನ್ಯ ಸಭೆ ಹಾಗೂ ರಾಜ್ಯಮಟ್ಟದ ಪುರಸ್ಕಾರ ಗಳಿಸಿದ ಮಕ್ಕಳಿಗೆ ಪ್ರಮಾಣಪತ್ರ ನೀಡಿ ಗೌರವಿಸಲಾಯಿತು
Published on

ರೋಣ: ಸ್ಕೌಟ್ಸ್ ಮತ್ತು ಗೈಡ್ಸ್‌ನಿಂದ ಮಕ್ಕಳಲ್ಲಿ ಪರಿಸರ ಪ್ರಜ್ಞೆ, ಸಂಸ್ಕೃತಿಯ ಅರಿವು ಮೂಡಿಸುವ ಕೆಲಸವಾಗಬೇಕು.ಪರಿಸರ ಜಾಗೃತಿ, ಸ್ವಚ್ಛತೆ ಅತ್ಯಂತ ಮಹತ್ವವಾದದ್ದು, ಪರಿಸರ ಉಳಿಸಿ ಬೆಳೆಸುವ ಕಾರ್ಯವನ್ನು ಮಕ್ಕಳಲ್ಲಿ ತುಂಬಬೇಕು ಎಂದು ಎಪಿಎಂಸಿ ಮಾಜಿ ಅಧ್ಯಕ್ಷ ರಾಜಣ್ಣ ಹೂಲಿ ಹೇಳಿದರು.

ಬುಧವಾರ ಪಟ್ಟಣದ ಬಿ.ಆರ್.ಸಿ. ಸಭಾಂಗಣದಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ವತಿಯಿಂದ ಜರುಗಿದ ತಾಲ್ಲೂಕು ಮಟ್ಟದ ಸ್ಕೌಟ್ಸ್ ಮಾಸ್ಟರ್ಸ್ ಮತ್ತು ಗೈಡ್ಸ್ ಕ್ಯಾಪ್ಟನ್ ಅವರ ಸಾಮಾನ್ಯ ಸಭೆ ಹಾಗೂ ರಾಜ್ಯಮಟ್ಟದ ಪುರಸ್ಕಾರ ಗಳಿಸಿದ ಮಕ್ಕಳಿಗೆ ಪ್ರಮಾಣ ಪತ್ರ ವಿತರಿಸುವವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಸ್ಕೌಟ್ಸ್ ಮತ್ತು ಗೈಡ್ಸ್ ಒಂದು ಉತ್ತಮ ಸಂಸ್ಥೆಯಾಗಿದೆ. ವಿದ್ಯಾರ್ಥಿಗಳು ಅಭ್ಯಾಸದೊಂದಿಗೆ ರಾಷ್ಟ್ರಭಿಮಾನ, ಸೇವಾ ಮನೋಭಾವನೆ ಹಾಗೂ ಶಿಸ್ತು ಕಲಿಯಬಹುದಾಗಿದೆ ಎಂದರು.

ಅಕ್ಷರ ದಾಸೋಹ ಯೋಜನೆಯ ನಿರ್ದೇಶಕ ಬಸವರಾಜ ಅಂಗಡಿ, ಎಂ.ಎ. ಫಣಿಬಂಧ, ಉಪ ತಹಸೀಲ್ದಾರ್ ಗಣೇಶ ಕೊಪ್ಪದ, ಜೆ.ಎಚ್. ಪೂಜಾರ, ಜಿ.ಎಸ್. ಪಾಟೀಲ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net