

ವಿಜಯಪುರ : ಮಕ್ಕಳಿಗೆ ಆಸ್ತಿ ಮಾಡುವ ಬದಲು ಅವರಿಗೆ ಶಿಣ ನೀಡಿ ಅವರನ್ನೇ ಆಸ್ತಿಯನ್ನಾಗಿ ಮಾಡಬೇಕು ಎಂದು ಹ್ಯುಮನಿಟಿ ಕೇರ್ ಅಸೋಸಿಯೇಷನ್ ಅಧ್ಯ ಇಮ್ತಿಯಾಜ್ ಮುಲ್ಲಾ ಹೇಳಿದರು.
ಇಲ್ಲಿನ ಇಂದಿರಾ ನಗರ ಬಡಾವಣೆಯ ಸರ್ಕಾರಿ ಉರ್ದು ಶಾಲೆ ನಂ. 15 ರಲ್ಲಿ ಅಸೋಸಿಯೇಷನ್ ವತಿಯಿಂದ ಮಕ್ಕಳಿಗೆ ಪರೀಾ ಸಾಮಗ್ರಿ ವಿತರಿಸಿ ಮಾತನಾಡಿದ ಅವರು, ಮಕ್ಕಳ ಭವಿಷ್ಯ ಶಿಣದಿಂದ ರೂಪಿತವಾದರೆ ಸಮಾಜದಲ್ಲಿ ಸ್ವಾಸ್ಥ ಮೂಡಲಿದೆ ಎಂದರು.
ಮಕ್ಕಳು ಉತ್ತಮ ಶಿಣ ಪಡೆದುಕೊಂಡು ಉನ್ನತ ಉದ್ದೆ ಪಡೆದರೆ ಸಮಾಜಕ್ಕೆ ಒಳ್ಳೆಯ ಸೇವೆ ನೀಡಲು ಸಾಧ್ಯ. ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಕಲಿಕೆಗೆ ಹೆಚ್ಚಿನ ಆದ್ಯತೆ ನೀಡಬೇಕು. ನಮ್ಮ ಸಂಸ್ಥೆ ಮಕ್ಕಳ ಭವಿಷ್ಯ ರೂಪಿಸಲು ನಿರಂತರವಾಗಿ ಶ್ರಮಿಸುತ್ತಿದೆ ಎಂದರು.
ವೈದ್ಯ ಜಿಲಾನಿ ಅವಟಿ, ಅಯ್ಯುಬ್ ಕಾಲೆಬಾಗ, ಶಿರಾಜ ಜಮಖಂಡಿ, ಅಬ್ದುಲರಜಾಕ ಬಿರ್ಜಾದಾರ, ಪೀರಾಅಹ್ಮದ ಹಡಗಲಿ, ತೌಸೀಫ ಹುನಗುಂದ, ಅನ್ವರ ಆಸಂಗಿ, ಬಾಷಾ ದೇಗಿನಾಳ, ಸಾಬೀರ ಹಮೀದ ಮತ್ತಿತರರಿದ್ದರು.