

ಬೆಂಗಳೂರು: ಕಾಂಗ್ರೆಸ್ ನಾಯಕರು ದಾಖಲೆಗಳನ್ನು ನಮ್ಮ ಕಚೇರಿಗೆ ಲಾರಿ ಕಳಿಸುವ ಬದಲು ಬೆಂಗಳೂರ ನಗರದಲ್ಲಿ ತುಂಬಿರುವ ಕಸವನ್ನು ಎತ್ತಲು ಅದನ್ನು ಬಳಸಿ , ಇದರಿಂದ ಬೆಂಗಳೂರು ಜನಕ್ಕೂ ಉಪಯೋಗ ಆಗಲಿದೆ, ಬೆಂಗಳೂರು ಕಸದಿಂದ ನಾರುತ್ತಿದೆ, ನಿಮ್ಮ ಲಾರಿಯಲ್ಲಿ ಆ ಕಸವನ್ನು ತುಂಬಿಕೊಂಡು ಹೋಗಿ ಬೆಂಗಳೂರನ್ನು ಕಸಮುಕ್ತಗೊಳಿಸಿ ಎಂದು ಡಿಕೆ ಶಿವಕುಮಾರ್ ಗೆ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಟಾಂಗ್ ನೀಡಿದರು.
ಸಾಕಪ್ಪ ಸಾಕು ಕಾಂಗ್ರೆಸ್ ಸರ್ಕಾರ ಬೃಹತ್ ಪ್ರತಿಭಟನೆಯಲ್ಲಿ ಮಾತನಾಡಿದ ಅವರು; ಭ್ರಷ್ಟಾಚಾರದ ಅರೋಪಗಳ ದಾಖಲೆಗಳನ್ನು ಹೊತ್ತ ಒಂದು ಕ್ಯಾಂಟರ್ ಅನ್ನು ನಾವೇ ಕೆಪಿಸಿಸಿ ಕಚೇರಿಗೆ ಕಳಿಸ್ತೀವಿ, ನಮ್ಮ ಹೋರಾಟ ಕೇಳಿ ಕಾಂಗ್ರೆಸ್ ಗೆ ತಳಮಳ ಶುರುವಾಗಿದೆ ಎಂದರು.