ಮತದಾರರಿಗೆ ತೊಂದರೆ ಆಗದಂತೆ ವ್ಯವಸ್ಥೆ ಕೈಗೊಳ್ಳಿ

Make arrangements so that voters do not suffer
ಕಲಾದಗಿ ಗ್ರಾಮದ ಮತಗಟ್ಟೆಗೆ ಅಧಿಕಾರಿ ಎಂ.ಬಿ. ನಾಗಠಾಣ ಭೇಟಿ ನೀಡಿ ಪರಿಶೀಲಿಸಿದರು. ಸೆಕ್ಟರ್ ಆಫೀಸರ್ ಹನುಮಂತ ಪೂಜಾರಿ, ವೃತ್ತ ಕಂದಾಯ ನಿರೀಕ್ಷಕ ಪ್ರಕಾಶ ನಾಯಕ ಇದ್ದರು.
Published on

ಕಲಾದಗಿ: ಬೀಳಗಿ ಮತಕ್ಷೇತ್ರದ ಸಹಾಯಕ ಚುನಾವಣಾ ಅಧಿಕಾರಿ ಎಂ.ಬಿ. ನಾಗಠಾಣ ಸೋಮವಾರ ಹಲವಾರು ಗ್ರಾಮಗಳಿಗೆ ಭೇಟಿ ನೀಡಿ ಮತಗಟ್ಟೆಗಳನ್ನು ಪರಿಶೀಲಿಸಿ ಕೈಗೊಳ್ಳಬೇಕಾದ ವ್ಯವಸ್ಥೆಗಳ ಬಗ್ಗೆ ಸಂಬಂಧಿಸಿದವರಿಗೆ ಸೂಚನೆ ನೀಡಿದರು.

ಬೆಳಗ್ಗೆ ಗದ್ದನಕೇರಿ ಗ್ರಾಮದ ಮತಗಟ್ಟೆಗಳಿಗೆ ಭೇಟಿ ನೀಡಿದರು. ಬಳಿಕ ಹಳೇ ಮುರನಾಳ, ಸೀಮಿಕೇರಿ, ತುಳಸಿಗೇರಿ, ಚಿಕ್ಕ ಹಾಗೂ ಹಿರೇಶೆಲ್ಲಿಕೇರಿ, ಖಜ್ಜಿಡೋಣಿ, ಗೋವಿಂದ ಕೊಪ್ಪ, ಉದಗಟ್ಟಿ, ಶಾರದಾಳ, ಖಜ್ಜಿಡೋಣಿ, ಸೊಕನಾದಗಿ, ದೇವನಾಳ ಗ್ರಾಮದಲ್ಲಿನ ಮತಗಟ್ಟೆಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

ವಿದ್ಯುತ್, ್ಯಾನ್, ಶೌಚಗೃಹ, ರ‌್ಯಾಂಪ್ ಅಳವಡಿಕೆ, ಕಟ್ಟಡದ ಸ್ಥಿತಿ, ನೆರಳು ಸೇರಿ ಇತರ ಸೌಲಭ್ಯಗಳ ಕೊರತೆ ಇದ್ದಲ್ಲಿ ಕೂಡಲೇ ಕಲ್ಪಿಸಬೇಕೆಂದು ಗ್ರಾಪಂ ಪಿಡಿಒ ಹಾಗೂ ಶಾಲೆ ಮುಖ್ಯಸ್ಥರಿಗೆ ಸೂಚಿಸಿದರು.

ಚುನಾವಣಾ ಕಾರ್ಯದ ಬಗ್ಗೆ ಸ್ಥಳದಲ್ಲಿದ್ದ ಗ್ರಾಮ ಲೆಕ್ಕಾಧಿಕಾರಿಗಳು, ಬಿಎಲ್‌ಒಗಳಿಂದ ಅಗತ್ಯ ಮಾಹಿತಿ ಪಡೆದು ಸುವ್ಯವಸ್ಥಿತವಾಗಿ ಚುನಾವಣೆ ನಡೆಯುವಂತೆ ಎಲ್ಲರೂ ಶ್ರಮವಹಿಸಬೇಕೆಂದರು.

ಸೆಕ್ಟರ್ ಅಧಿಕಾರಿಗಳಾದ ಹನುಮಂತ ಪೂಜಾರಿ, ರವೀಂದ್ರ ನಾಯಕ, ವೃತ್ತ ಕಂದಾಯ ನಿರೀಕ್ಷಕ ಪ್ರಕಾಶ ನಾಯಕ, ಗ್ರಾಮ ಲೆಕ್ಕಾಧಿಕಾರಿಗಳಾದ ಸಂತೋಷಕುಮಾರ ತೇಲಿ, ಶ್ರೀಕಾಂತ ಪಾಟೀಲ, ರವಿ ಕುಳ್ಳೊಳ್ಳಿ, ರವಿ ಚಲವಾದಿ, ವಿಜಯಲಕ್ಷ್ಮಿ ನಾಯ್ಕರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net