ಅಮರಗೋಳ ಗ್ರಾಮ ಪುಣ್ಯಕ್ಷೇತ್ರವನ್ನಾಗಿಸಿ

Make Amargol village a holy place
ಅಮರಗೋಳದಲ್ಲಿ ನಡೆದ ಮಲಕಣ್ಣ ಮಾಸ್ತರರ ಸ್ಮರಣೋತ್ಸವ, ಸಾಹಿತ್ಯ ರತ್ನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಶಿಕ್ಷಕ ಎಚ್.ಆರ್.ಬಾಗವಾನ ರಚಿಸಿರುವ ತತ್ವಪದಕಾರ ಬಸಪ್ಪ ಶರಣರ ಜೀವನಗಾಥೆ ಕೃತಿ ಬಿಡುಗಡೆಗೊಳಿಸಲಾಯಿತು. ಅನ್ನದಾನಭಾರತಿ ಅಪ್ಪಣ್ಣ ಸ್ವಾಮೀಜಿ, ಮಾಧವಾನಂದ ಭಾರತಿ ಸ್ವಾಮೀಜಿ, ಅಶೋಕ ಮಣಿ, ಅಬ್ದುಲ್‌ರಹೆಮಾನ ಬಿದರಕುಂದಿ, ಕಾಮರಾಜ ಬಿರಾದಾರ, ಎಸ್.ಎಂ.ನದಾ ಇನ್ನಿತರರು ಇದ್ದರು.
Published on

ಮುದ್ದೇಬಿಹಾಳ: ಬಸವಣ್ಣನವರ ಅನುಯಾಯಿಗಳಾಗಿದ್ದ ಶರಣರು (ಅಮರಗಣಂಗಳು) ಐಕ್ಯರಾಗಿರುವ ಕೃಷ್ಣಾ ನದಿ ತೀರದ ಅಮರಗೋಳ ಗ್ರಾಮವನ್ನು ಪುಣ್ಯಕ್ಷೇತ್ರವಾಗಿ ಅಭಿವೃದ್ಧಿಪಡಿಸುವಂತೆ ಸರ್ಕಾರಕ್ಕೆ ಹಲವು ಬಾರಿ ಪತ್ರ ಬರೆದು ಒತ್ತಾಯಿಸಲಾಗಿದೆ. ಈ ಭಾಗದ ಜನಪ್ರತಿನಿಧಿಗಳು ಈ ಬಗ್ಗೆ ಸರ್ಕಾರಕ್ಕೆ ಹಕ್ಕೊತ್ತಾಯ ಮಾಡಬೇಕು ಎಂದು ತಂಗಡಗಿಯ ಹಡಪದ ಅಪ್ಪಣ್ಣ ದೇವರ ಮಹಾಸಂಸ್ಥಾನದ ಪೀಠಾಧಿಪತಿ ಅನ್ನದಾನಭಾರತಿ ಅಪ್ಪಣ್ಣ ಸ್ವಾಮೀಜಿ ಹೇಳಿದರು.

ಅಮರಗೋಳದ ನಾಗಲಿಂಗೇಶ್ವರ ದೇವಸ್ಥಾನದಲ್ಲಿ ಭಾನುವಾರ ಏರ್ಪಡಿಸಿದ್ದ ಭಾಮಿನಿ ಷಟ್ಪದಿ ಕವಿ ಮಲಕಣ್ಣ ಮಾಸ್ತರ ಅಮರಗೋಳ (ಮಲಿಕಸಾಬ ನದಾ) ಅವರ 8ನೇ ಸ್ಮರಣೋತ್ಸವ, ಕೃತಿ ಬಿಡುಗಡೆ, ಪ್ರಶಸ್ತಿ ಪ್ರದಾನ, ನಿವೃತ್ತ್ತರು, ಸಾಧಕರಿಗೆ ಸನ್ಮಾನ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಅಮರಗೋಳ ಗ್ರಾಮ ಬಸವಣ್ಣನವರ ಐಕ್ಯಸ್ಥಳ ಕೂಡಲಸಂಗಮ, ಬಸವಣ್ಣನವರ ಆಪ್ತ ಕಾರ್ಯದರ್ಶಿ ಹಡಪದ ಅಪ್ಪಣ್ಣ ಮತ್ತು ನೀಲಾಂಬಿಕೆಯ ಐಕ್ಯಸ್ಥಳ ತಂಗಡಗಿಯಿಂದ ಕೂಗಳತೆ ದೂರದಲ್ಲಿದೆ. ಎಲ್ಲರೂ ಹಕ್ಕೊತ್ತಾಯಕ್ಕೆ ಅಣಿಯಾದಲ್ಲಿ ನಾನು ಸೇರಿ ಈ ಭಾಗದ ಸ್ವಾಮೀಜಿಗಳು ನಿಮ್ಮ ಜೊತೆಗಿರುತ್ತೇವೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಸಾಹಿತಿ, 5ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷ ಅಶೋಕ ಮಣಿ ಮಾತನಾಡಿ, ಮಲಕಣ್ಣನವರ ಜೀವನ ಚರಿತ್ರೆ ಕುರಿತಾದ ಪುಸ್ತಕ ಬರೆಯುವ ಅಪೇಕ್ಷೆ ಮಾಡಿದ್ದು, ಮುಂದಿನ ವರ್ಷ ಇದೇ ವೇದಿಕೆಯ 9ನೇ ಸ್ಮರಣೋತ್ಸವದಲ್ಲಿ ಅದನ್ನು ಬಿಡುಗಡೆಗೊಳಿಸುವೆ. ಸೌಹಾರ್ದದ ಪ್ರತೀಕವಾಗಿರುವ ಮಲಕಣ್ಣ ಮಾಸ್ತರ ಪೂಜ್ಯನೀಯರು ಎಂದರು.

ತಂಗಡಗಿ ಸಿದ್ಧಾರೂಢ ಮಠದ ಮಾಧವಾನಂದ ಭಾರತಿ ಸ್ವಾಮೀಜಿ, ಇಳಕಲ್ಲದ ಸಾಹಿತಿ ಮುರ್ತುಜಾಬೇಗಂ ಕೊಡಗಲಿ, ತಾಲೂಕು ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ, ವಾಗ್ಮಿ ಪರಶುರಾಮ ಚೌಡಕೇರ, ವಚನ ಮತ್ತು ಸಾಂಸ್ಕೃತಿಕ ಪರಿಷತ್ ಜಿಲ್ಲಾಧ್ಯಕ್ಷ ಅಬ್ದುಲ್‌ರಹೆಮಾನ ಬಿದರಕುಂದಿ, ಕಾರ್ಯಕ್ರಮ ಆಯೋಜಕ ಶೇಖಸಾಬ ನದಾ, ಎಚ್.ಆರ್.ಬಾಗವಾನ ಮಾತನಾಡಿದರು.

ಕಾಶಿಂಬಿ ಮಲಿಕಸಾಬ ನದಾ ಉಪಸ್ಥಿತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಬಿಸಿ ಪ್ರೌಢಶಾಲೆ ಶಿಕ್ಷಕ ಎಚ್.ಆರ್.ಬಾಗವಾನ ಅವರಿಗೆ ಸಾಹಿತ್ಯ ರತ್ನ, ಎಂ.ಡಿ.ಅತ್ತಾರ, ಎನ್.ಎಚ್.ನಾಯ್ಕೋಡಿ, ಶೇಖವ್ವ ಪುಡಜಾಲಿ, ಎಚ್.ಸಿ.ಗುಡದಿನ್ನಿ, ಎಂ.ಕೆ.ಬಾಗವಾನ, ದಾನಮ್ಮ ಸುಕಾಲಿ, ಎಸ್.ಎಸ್.ಸಜ್ಜನ, ಎಂ.ಬಿ.ಗಣಾಚಾರಿ, ಆರ್.ಎ.ಲೋಣಿ, ಎಂ.ಜಿ.ಕುನ್ನೂರ ಶಿಕ್ಷಕರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಾಧಕರಾದ ಬಿ.ಬಿ.ಪಿಂಜಾರ, ಎಂ.ಡಿ.ನದಾ, ಎಸ್.ಪಿ.ಲಮಾಣಿ, ವಿ.ಎಚ್.ಕುಲಕರ್ಣಿ, ರವಿಗೌಡ ಪಾಟೀಲ, ಎಚ್.ಡಿ.ಆಲೂರ, ಝಡ್.ಎಂ.ಬೀಳಗಿ ಅವರನ್ನು ಸನ್ಮಾನಿಸಲಾಯಿತು.

ಸಿಆರ್‌ಪಿ ಬಿ.ಜಿ.ಬಶೆಟ್ಟಿ, ದೊಡ್ಡಯ್ಯ ಹಿರೇಮಠ, ವಿನೋದ ಹಿರೇಮಠ, ಬಿ.ಪಿ.ಪಾಟೀಲ, ಗ್ರಾಪಂ ಸದಸ್ಯರಾದ ಬಸವರಾಜ ಗೋಡಿ, ನೀಲಮ್ಮ ಹಡಲಗೇರಿ, ಮಂಜುಳಾ ವಡ್ಡರ, ಗದ್ದೆಮ್ಮ ವಾಲಿಕಾರ, ಎಸ್.ಬಿ.ಕವಡಿಮಟ್ಟಿ ಸೇರಿ ಹಲವರು ಉಪಸ್ಥಿತರಿದ್ದರು.

ಮೌಲಾನಾ ಮಹ್ಮದರಫೀಕ ಕಮಲದಿನ್ನಿ ಕುರಾನ್ ಪಠಿಸಿದರು. ಸಂಗಮೇಶ ಶಿವಣಗಿ ತಂಡದವರು ಪ್ರಾರ್ಥಿಸಿದರು. ಪ್ರಾಚಾರ್ಯ ಎಸ್.ಕೆ.ಹಡಲಗೇರಿ ಸ್ವಾಗತಿಸಿದರು. ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಉಪಾಧ್ಯಕ್ಷೆ ಬಿ.ಎಂ.ಗದ್ದಿ ನಿರೂಪಿಸಿದರು. ಎ.ಎಂ.ನದಾ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net